ಸ್ವಂತ ಸ್ಪೇಸ್‌ ಸ್ಟೇಷನ್‌ ನಿಯೋಜನೆಗೆ ಮುಂದಾದ ರಷ್ಯಾ! ಪುಟಿನ್‌ ಮಹತ್ವದ ಘೋಷಣೆ!

masthmagaa.com:

ಹೊಸದಾಗಿ ಸ್ವಂತ ಸ್ಪೇಸ್‌ ಸ್ಟೇಷನ್‌ ನಿಯೋಜನೆ ಮಾಡೋದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅನೌನ್ಸ್‌ ಮಾಡಿದ್ದಾರೆ. ISSನಿಂದ ಹೊರಬರಲು ಮುಂದಾಗಿರೋ ರಷ್ಯಾ ಇದೀಗ ಈ ಯೋಜನೆಗೆ ಕೈ ಹಾಕಿರೋದಾಗಿ ಹೇಳಿದೆ. Russian Orbital Station (ROS) ಅನ್ನೋ ನೂತನ ಸ್ಪೇಸ್‌ ಸ್ಟೇಷನ್‌ನ ಮೊದಲ ಭಾಗವನ್ನ 2027ರಲ್ಲಿ ಭೂಮಿಯ ಕಕ್ಷೆಯಲ್ಲಿ ನಿಯೋಜಿಸಲು ಪ್ಲ್ಯಾನ್‌ ಮಾಡಲಾಗಿದೆ. ಹಳೆದಾಗಿರೋ ISS ಬದಲಿಗೆ ROS ನಿಯೋಜನೆ ಮಾಡ್ತಾ ಇದ್ದೀವಿ ಅಂತ ಪುಟಿನ್‌ ಘೋಷಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿ, ಭವಿಷ್ಯದ ಕೆಲಸಗಳನ್ನ ಪೂರ್ಣಗೊಳಿಸೋದಕ್ಕೆ ಈ ROS ನಿಯೋಜಿಸಲಾಗ್ತಿದೆ. ಸದ್ಯ 2028 ರವರೆಗೆ ISSನ ಭಾಗಿದಾರಿಯಾಗಿ ರಷ್ಯಾ ಕಂಟಿನ್ಯೂ ಮಾಡಲಿದೆ ಅಂತ ಪುಟಿನ್ ಹೇಳಿದ್ದಾರೆ. ಇನ್ನು 50 ದಶಕಗಳ ಬಳಿಕ ಈ ವರ್ಷದ ಅಗಸ್ಟ್‌ ತಿಂಗಳಲ್ಲಿ ರಷ್ಯಾ ಚಂದ್ರಯಾನ ಮಾಡಿತ್ತು. ಆದ್ರೆ ವಿಫಲವಾಗಿತ್ತು. ಈ ಕುರಿತು ಮಾತನಾಡಿದ ಪುಟಿನ್‌, ಇದರ ಮೇಲೆ ಇನ್ನಷ್ಟು ವರ್ಕ್‌ ಮಾಡ್ತೀವಿ. ಈ ಲೂನಾರ್‌ ಪ್ರೋಗ್ರಾಮ್‌ನ ಕಂಟಿನ್ಯೂ ಮಾಡೇ ಮಾಡ್ತೀವಿ. ಈ ಮಿಷನ್‌ನ ಇಲ್ಲಿಗೆ ನಿಲ್ಲಿಸೋದಿಲ್ಲ ಅಂತ ತಿಳಿಸಿದ್ದಾರೆ. ಅಂದ್ಹಾಗೆ 2030ರ ಒಳಗೆ ISS ಕಾರ್ಯಾಚರಣೆ ಸ್ಥಗಿತಗೊಳಿಸಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಅದರ ಪಾರ್ಟನರ್‌ ರಾಷ್ಟ್ರಗಳು ನಿರ್ಧರಿಸಿವೆ. ಅದಕ್ಕೂ ಮೊದಲೇ ISS ನಿಂದ ಹೊರಬರೋದಾಗಿ ರಷ್ಯಾ ಹೇಳಿದೆ.

-masthmagaa.com

Contact Us for Advertisement

Leave a Reply