‘ನಾವು ಸೋತಿಲ್ಲ ಕಾಂಗ್ರೆಸ್ ಗ್ಯಾರಂಟಿ ಗೆದ್ದಿದೆʼ : ಬಿಜೆಪಿ

masthmagaa.com:

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ‘ನಾವು ಸೋತಿಲ್ಲ ಕಾಂಗ್ರೆಸ್ ಗ್ಯಾರಂಟಿ ಗೆದ್ದಿದೆʼ ಅಂತ ಬಿಜೆಪಿ ಮಾಜಿ ಶಾಸಕ ಸೋಮಶೇಖರ್‌ ರೆಡ್ಡಿ ಹೇಳಿದ್ದಾರೆ. ಇದೇ ವೇಳೆ ಇವತ್ತು ಫ್ರೀಯಾಗಿ ಹೋದ ಬಸ್ಸಿನಲ್ಲಿ ಮುಂದೆ 4 ಪಟ್ಟು ಹಣ ಕೊಡಬೇಕಾಗ್ತದೆ. ಲೋಕಸಭೆ ಚುನಾವಣೆಯಲ್ಲಿ ಇದೇ ತಪ್ಪು ಮಾಡಿದ್ರೆ, ಮೋದಿ ಅವರನ್ನು ಕಳೆದು ಕೊಳ್ಳುಬೇಕಾಗುತ್ತದೆ. ಇದಕ್ಕಿಂತ ದುರ್ದೈವ ಇನ್ನೊಂದಿಲ್ಲ. ಯಾಕಂದ್ರೆ ಕಾಂಗ್ರೆಸ್ ಅವಧಿಯಲ್ಲಿ ಮನ ಮೋಹನ್ ಸಿಂಗ್ ಹೇಗಿರುತ್ತಿದ್ರು. ಈಗ ಮೋದಿ ಹೇಗಿದ್ದಾರೆ ನೋಡಿ ಅಂತ ವ್ಯಂಗ್ಯವಾಗಿ ಆ್ಯಂಕ್ಟಿಂಗ್ ಮಾಡಿ ತೋರಿಸಿದ್ದಾರೆ. ಜೊತೆಗೆ ಪಟ್ನಾದಲ್ಲಿ ಸೇರಿದ ವಿರೋಧಿಗಳ ಸಭೆಯಲ್ಲಿ ಲಾಲು ಪ್ರಸಾದ್ ಅವ್ರು ರಾಹುಲ್​ಗೆ ಮದುವೆಯಾಗಿ ಎಂದಿದ್ದಾರೆ. ಆದ್ರೆ, ರಾಹುಲ್​ಗೆ ಈಗಾಗಲೇ ‌ಮದುವೆಯಾಗಿದೆ. ನಮ್ಮ ದೇಶದಲ್ಲಿ ಅಲ್ಲ, ಬೇರೆ ದೇಶದಲ್ಲಿ ರಾಹುಲ್‌ಗೆ ಮದುವೆಯಾಗಿದ್ದು, ಮಕ್ಕಳಿದ್ದಾರೆ. ಆದ್ರೆ, ನಮ್ಮ ದೇಶದಲ್ಲಿ ಸನ್ಯಾಸಿಯಾಗಿ ಜೋಡೋ ಜೋಡು ಎಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಓಡಾಡುತ್ತಿದ್ದಾರೆ, ಏನು ಜೋಡಿಸಿದ್ರೋ ಗೊತ್ತಾಗ್ತಿಲ್ಲ ಅಂತ ವ್ಯಂಗ್ಯ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply