ಜಮ್ಮು-ಕಾಶ್ಮೀರ: ಅತಿದೊಡ್ಡ ಉಗ್ರ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಇಬ್ಬರು ಸೇನಾಧಿಕಾರಿಗಳು

masthmagaa.com:

ಪಾಕ್‌ ಪ್ರಾಯೋಜಿತ ಉಗ್ರರನ್ನ ಸದೆಬಡಿಯುವ ಕಾರ್ಯಾಚರಣೆಯಲ್ಲಿ ಮೂವರು ಭಾರತೀಯ ವೀರಪುತ್ರರು ವೀರಮರಣ ಹೊಂದಿರೋ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ಅಲ್ಲಿನ ಅನಂತನಾಗ್ ಜಿಲ್ಲೆಯಲ್ಲಿ ಸೇನೆ ಹಾಗೂ ಭಯೋತ್ಪಾದಕರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಭಾರತೀಯ ಸೇನೆಯ ಕರ್ನಲ್‌, ಒಬ್ಬ ಮೇಜರ್‌ ಹಾಗು ಜಮ್ಮು ಕಾಶ್ಮೀರ ಪೋಲಿಸ್‌ ಪಡೆಯ ಒಬ್ಬ DSP ಹುತಾತ್ಮರಾಗಿದ್ದಾರೆ. ಭಯೋತ್ಪಾದಕರು ಅಡಗಿಕೊಂಡಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ಇದ್ದಿದ್ರಿಂದ ಅನಂತ್‌ನಾಗ್‌ನ ಕೊಕರ್‌ನಾಗ್‌ ಅನ್ನೋ ಪ್ರದೇಶದಲ್ಲಿ ಉಗ್ರರ ಅಡಗುದಾಣದ ಮೇಲೆ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ರು. ಈ ವೇಳೆ ಉಗ್ರರು ಇದ್ದ ಜಾಗಕ್ಕೆ ಹೋಗಲು ರಕ್ಷಣಾ ಪಡೆಗಳು ಬಿಲ್ಡಿಂಗ್‌ ಒಂದನ್ನ ಹತ್ತಿದ್ದವು. ಆಗ ಅಡಗಿಕೊಂಡಿದ್ದ ಉಗ್ರರಲ್ಲಿ ಮೂವರು ರಕ್ಷಣಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದೆ. ಈ ವೇಳೆ ರಾಷ್ಟ್ರೀಯ ರೈಫಲ್‌ ದಳವನ್ನ ಮುನ್ನೆಡಸುತ್ತಿದ್ದ ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ. ಜೊತೆಗೆ ಮೇಜರ್‌ ಆಶಿಶ್‌ ಧೋಂಚಕ್‌ ಹಾಗು ಜಮ್ಮು-ಕಾಶ್ಮೀರ ಪೋಲಿಸ್‌ನ DySP ಹುಮಾಯುನ್‌ ಭಟ್‌ ತೀವ್ರತರವಾಗಿ ಗಾಯಗೊಂಡಿದ್ದಾರೆ. ಬಳಿಕ ಅವ್ರನ್ನ ಶ್ರೀನಗರದ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗ್ತಿತ್ತು ಆದ್ರೆ ಮಾರ್ಗಮಧ್ಯದಲ್ಲೇ ಕೊನೆಉಸಿರೆಳದಿದ್ದಾರೆ ಅಂತ ಭಾರತೀಯ ಸೇನೆ ತಿಳಿಸಲಾಗಿದೆ. ಅಂದ್ಹಾಗೆ DySP ಹುಮಾಯುನ್‌ ಭಟ್‌ ಅವ್ರ ತಂದೆ ಗುಲಾಂ ಹಸನ್‌ ಭಟ್‌ ಅವ್ರು ಕೂಡ ಜಮ್ಮು ಕಾಶ್ಮೀರ ಪೋಲಿಸ್‌ ಪಡೆಯಲ್ಲಿ IGಯಾಗಿದ್ರು ಎನ್ನಲಾಗಿದೆ. ಇನ್ನು ಭಯೋತ್ಪಾದಕರು ಲಷ್ಕರ್‌ನ ಮತ್ತೊಂದು ರೂಪ TRFಗೆ ಸೇರಿದ್ರು, ಕಾರ್ಯಾಚರಣೆ ಇನ್ನು ಜಾರಿಯಿದೆ ಅನ್ನೋ ಮಾಹಿತಿ ನೀಡಲಾಗಿದೆ.

ಇನ್ನು ನಿನ್ನೆ ರಾತ್ರಿ ಆರಂಭವಾದ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ. ಅತ್ತ ‘ರಾಜೌರಿಯ ನಾರ್ಲಾ ಪ್ರದೇಶದಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಎರಡನೇ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಇತ್ತ ಉಗ್ರ ಕಾರ್ಯಾಚರಣೆಯಲ್ಲಿ ಯೋಧರು ಹುತಾತ್ಮರಾದ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾದಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಪಾಕಿಸ್ತಾನದ ಜೊತೆಯಲ್ಲಿ ಭಾರತದ ಕ್ರಿಕೆಟ್‌ ತಂಡ ಯಾವುದೇ ಪಂದ್ಯ ಆಡ್ಬಾರ್ದು. ಭಾರತದಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನ ಬಾಯ್ಕಾಟ್‌ ಮಾಡ್ಬೇಕು. ಈ ಮೂಲಕ ಭಯೋತ್ಪಾದಕರನ್ನ ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಸ್ಟ್ರಾಂಗ್‌ ಮೆಸೇಜ್‌ ತಲುಪಿಸಬೇಕು ಅಂತ ಹಲವರು ಆಗ್ರಹಿಸಿದ್ದಾರೆ. ಜೊತೆಗೆ ಜಮ್ಮುವಿನಲ್ಲಿ ಹಲವರು ಪಾಕ್‌ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ಕೃತ್ಯವನ್ನ ಭಾರತ ಎಂದೂ ಕ್ಷಮಿಸಲ್ಲ ಹಾಗೂ ಮರೆಯೋದಿಲ್ಲ. ಇದಕ್ಕೆ ತಕ್ಕ ಉತ್ತರ ಕೊಡ್ತೀವಿ ಅಂತ ಹೇಳಿದೆ. ಇತ್ತ ಪಾಕಿಸ್ತಾನವನ್ನ ಐಸೋಲೇಟ್‌ ಮಾಡುವ ಅಗತ್ಯವಿದೆ ಅಂತ ಕೇಂದ್ರ ಸಚಿವ ಹಾಗೂ ಮಾಜಿ ಸೇನಾ ಮುಖ್ಯಸ್ಥ ಜನರಲ್‌ ವಿಕೆ ಸಿಂಗ್‌ ಅವರು ಹೇಳಿದ್ದಾರೆ. ನಾವು ಇದನ್ನ ಯೋಚನೆ ಮಾಡಬೇಕಿದೆ. ನಾವು ಪಾಕಿಸ್ತಾನವನ್ನ ಪ್ರತ್ಯೇಕವಾಗಿ ಇಡದೆ ಇದ್ರೆ ಅವ್ರು ಈ ಭಯೋತ್ಪಾದಕ ಕೃತ್ಯಗಳನ್ನ ನಾರ್ಮಲ್‌ ಅಂತ ಅನ್ಕೊಂಡು ಸುಮ್ನೆ ಇರ್ತಾರೆ. ಹೀಗಾಗಿ ಪಾಕ್‌ ಮೇಲೆ ಒತ್ತಡ ಹಾಕಲು ಐಸೋಲೇಟ್‌ ಮಾಡ್ಬೇಕು ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ಎರಡನೇ ದಿನವಾದ ಇಂದು ಕೂಡ ಇಬ್ಬರು ಉಗ್ರರನ್ನ ಹೊಡೆದುರುಳಿಸಲು ಕಾರ್ಯಾಚರಣೆ ಕಂಟಿನ್ಯೂ ಮಾಡಲಾಗ್ತಿದೆ ಅಂತ ಸೇನೆ ಹೇಳಿದೆ.

-masthmagaa.com

Contact Us for Advertisement

Leave a Reply