ಚಾಲಕನಿಲ್ಲದೆ 80 ಕಿಲೋ ಮೀಟರ್‌ ಸಂಚಾರ ನಡೆಸಿದ ರೈಲು!

masthmagaa.com:

ಹಾಲಿವುಡ್‌ನ ಅನ್‌ಸ್ಟಾಪೆಬಲ್‌ ಮೋವಿ ತರ ಇನ್ಸಿಡೆಂಟ್‌ ಒಂದು ಇಂಡಿಯಾದಲ್ಲಿ ಆಗಿದೆ. ಚಾಲಕರಿಲ್ಲದೆ ಗೂಡ್ಸ್ ರೈಲೊಂದು 80 ಕಿಲೋ ಮೀಟರ್‌ ಸಂಚಾರ ನಡೆಸಿರೊ ಘಟನೆ ಪಂಜಾಬ್‌ನಲ್ಲಿ ವರದಿಯಾಗಿದೆ. ಜಮ್ಮುವಿನ ಕಥುವಾದಿಂದ ಪಂಜಾಬ್‌ನ ಹೋಷಿಯಾರ್‌ಪುರ್‌ವರೆಗೆ ಈ ರೈಲು ಲೋಕೊಪೈಲಟ್‌ಗಳಿಲ್ಲದೇ ಚಲಿಸಿದೆ. 53 ಕೋಚ್‌ಗಳ ಈ ಗೂಡ್ಸ್‌ ರೈಲ್‌ನ ಚಾಲಕರು ಕಥುವಾ ನಿಲ್ದಾಣದಲ್ಲಿ ರೈಲನ್ನ ನಿಲ್ಸಿ ಟೀ ಕುಡಿಯೋಕೆ ಹೋಗಿದ್ರು. ಆದ್ರೆ ಇದರ ಡಿಸೇಲ್ ಇಂಜಿನ್‌‌ನ್ನ ಆಫ್‌ ಮಾಡಿರ್ಲಿಲ್ಲ. ಈ ವೇಳೆ ಕಥುವಾದಿಂದ ಪಠಾಣ್‌ಕೋಟ್ ಕಡೆಗೆ ಇಳಿಜಾರು ಇರೋ ಕಾರಣ ಇದ್ದಕ್ಕಿದ್ದಂತೆ ರೈಲು ಓಡಲು ಆರಂಭಿಸಿದೆ. ನಂತರ ಸುಮಾರು 90ಕಿಲೋ ಮೀಟರ್‌ ವೇಗವನ್ನ ರೀಚ್‌ ಆಗಿ, ಪಂಜಾಬ್‌ನ ಹೋಶಿಯಾರ್‌ಪುರ್‌ವರಗೆ ಸುಮಾರು 80 ಕಿಲೋ ಮೀಟರ್‌ ಚಲಿಸಿದೆ. ಅದೃಷ್ಟವಶಾತ್ ಹೊಶಿಯಾರ್‌ಪುರದ ಬಸ್ಸಿ ಗ್ರಾಮದ ಬಳಿ ಟ್ರ್ಯಾಕ್‌ನಲ್ಲಿ ಸ್ವಲ್ಪ ಅಪ್‌ ಬಂದಿದ್ರಿಂದ… ಏರಿ ಬಂದಿದ್ರಿಂದ ಟ್ರೈನ್‌ ತಂತಾನೆ ಸ್ಲೋ ಆಗಿದೆ. ನಂತರ ಅಧಿಕಾರಿಯೊಬ್ರು ನಿಧಾನವಾಗಿ ಹೋಗ್ತಿದ್ದ ಟ್ರೈನ್‌ ಮೇಲೆ ಹತ್ತಿ ಎಮರ್ಜೆನ್ಸಿ ಬ್ರೇಕ್‌ ಹಾಕಿದ್ದಾರೆ. ಇನ್ನು ಈ ರೈಲು ಕಥುವಾದಲ್ಲಿ ಮಿಸ್‌ ಆಗ್ತಿದ್ದಂಗೆ ಅಧಿಕಾರಿಗಳು ಅಲರ್ಟ್‌ ಆಗಿ ಎಲ್ಲಾ ಬೇರೇ ಟ್ರೈನ್‌ಗಳನ್ನ ನಿಲ್ಲಿಸಿ, ಎಲ್ಲಾ ಕ್ರಾಸಿಂಗ್‌ಗಳನ್ನ ಕ್ಲೋಸ್‌ ಮಾಡಿ, ಓವರ್‌ಹೆಡ್‌ ಪವರ್‌ ಸಪ್ಲೈ ಕಟ್‌ ಮಾಡಿ, ಎಲ್ಲಾ ಸರ್ವೀಸ್‌ ಟ್ರ್ಯಾಕ್‌ಗಳನ್ನೂ ಕ್ಲೋಸ್‌ ಮಾಡಿದ್ರು. ಬೆಳಗ್ಗೆ ಎದ್ದು ಆ ಲೋಕೋಪೈಲಟ್‌ಗಳು ಯಾರ್‌ ಮುಖ ನೋಡಿದ್ರು ಗೊತ್ತಿಲ್ಲ, ಮಾರ್ಗಮಧ್ಯೆ ಯಾವುದೇ ತೊಂದ್ರೆ ಆಗ್ದೇ, ಟ್ರೈನ್‌ ಸ್ಲೋ ಆಗಿದೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಕಥುವಾ ಸ್ಟೇಷನ್‌ನ 6 ಅಧಿಕಾರಿಗಳನ್ನ ಸಸ್ಪೆಂಡ್‌ ಮಾಡಲಾಗಿದೆ. ಈ ಗೂಡ್ಸ್‌ ಟ್ರೈನ್‌ ಜಲ್ಲಿ ಕಲ್ಲುಗಳನ್ನ ಲೋಡ್‌ ಮಾಡ್ಕೊಂಡ್‌ ಹೋಗ್ತಿತ್ತು. ಆದ್ರೆ ಚಾಲಕರನ್ನ ಬಿಟ್ಟು ಬೇರಾವುದೇ ಸಿಬ್ಬಂದಿ ಇದ್ರಲ್ಲಿ ಇದ್ರಾ ಅನ್ನೋ ಮಾಹಿತಿ ಲಭ್ಯವಾಗಿಲ್ಲ.

-masthmagaa.com

Contact Us for Advertisement

Leave a Reply