2G ಹಾಗು 3G ಸರ್ವೀಸಸ್‌ಗಳನ್ನ ಬಂದ್‌ ಮಾಡಿ: ಸರ್ಕಾರಕ್ಕೆ ಜಿಯೋ ಮನವಿ

masthmagaa.com:

ದೇಶದಲ್ಲಿ 5G ಕಾಲಿಟ್ಟು ಒಂದು ವರ್ಷ ಆಗಿದೆ ಆದ್ರೆ ಇನ್ನೂ ಎಲ್ಲಾ ಕಡೆ ಹರಡಿಲ್ಲ. ಇದ್ರ ನಡುವೆಯೇ 2G ಹಾಗು 3G ಸರ್ವೀಸಸ್‌ಗಳನ್ನ ಬಂದ್‌ ಮಾಡ್ಬೇಕು ಅಂತ ರಿಲಾಯನ್ಸ್‌ ಜಿಯೋ ಸರ್ಕಾರಕ್ಕೆ ಮನವಿ ಮಾಡಿದೆ. TRAIನ ಕನ್ಸಲ್ಟೇಷನ್‌ ಪೇಪರ್‌ ಒಂದಕ್ಕೆ ಜಿಯೋ ಈ ರೀತಿ ರಿಯಾಕ್ಟ್‌ ಮಾಡಿದೆ. ಅನಾವಶ್ಯಕ ನೆಟ್‌ವರ್ಕ್‌ ವೆಚ್ಚಗಳನ್ನ ಕಡಿತಗೊಳಿಸೋಕೆ ಸರ್ಕಾರ 2G, 3G ಸರ್ವೀಸ್‌ಗಳನ್ನ ಕ್ಲೋಸ್‌ ಮಾಡೋಕೆ ನೋಡ್ಬೇಕು. ಇದ್ರಿಂದ 5G ಎಕೋಸಿಸ್ಟಂ ಬೆಳವಣಿಗೆಗೆ ಕೂಡ ವೇಗ ಸಿಗುತ್ತೆ ಅಂತ ಹೇಳಿದೆ. ಆದ್ರೆ ಇಂಟರೆಸ್ಟಿಂಗ್‌ ಅಂದ್ರೆ ಜಿಯೋ 2G ಸೇವೆಗಳನ್ನ ನೀಡಲ್ಲ. ಆದ್ರೆ ಅತ್ತ 2G, 3G ಸೇವೆ ಕೊಡೋ VI ಕೂಡ ಹೀಗೆ ಹೇಳಿದೆ. 2G ಬಳಕೆದಾರರು 5G ಶಿಫ್ಟ್‌ ಆಗುವಂತೆ ಸರ್ಕಾರ ಮಾಡ್ಬೇಕು ಅಂತ ಹೇಳಿದೆ.

-masthmagaa.com

Contact Us for Advertisement

Leave a Reply