masthmagaa.com:

ಕೊರೋನಾ ನಡುವೆಯೇ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬದಲಾವಣೆಗಳು ಇಡೀ ದೇಶಕ್ಕೆ ಮಾದರಿಯಾಗಲಿದೆ ಅಂತ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (Primary Health Centre-PHC) ಸಂಬಂಧಿಸಿದಂತೆ ಇವತ್ತು ಸಭೆ ನಡೀತು. ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವರು ಆರೋಗ್ಯ ಕ್ಷೇತ್ರದಲ್ಲಿ ತರಲು ಇಚ್ಛಿಸಿರುವ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದ್ರು.

– ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುವ ವೈದ್ಯರ ಸಂಖ್ಯೆಯನ್ನ 3ಕ್ಕೆ ಏರಿಸಲಾಗುತ್ತದೆ. ಇದರಲ್ಲಿ ಓರ್ವ ಮಹಿಳಾ, ಓರ್ವ ಆಯುಷ್ ವೈದ್ಯರು ಕೂಡ ಇರ್ತಾರೆ.

– ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಆ್ಯಂಬುಲೆನ್ಸ್ ಇರುತ್ತೆ. ಮೊದಲು ಒಂದೂವರೆ ಲಕ್ಷ ಜನರಿಗೆ ಒಂದು ಆ್ಯಂಬುಲೆನ್ಸ್ ಇರುತ್ತಿತ್ತು. ಇನ್ಮುಂದೆ 30 ಸಾವಿರ ಜನರಿಗೆ ಒಂದು ಆ್ಯಂಬುಲೆನ್ಸ್ ಲಭ್ಯವಾಗುತ್ತೆ.

–  ಎರಡು 2 ಎಕರೆ ಪ್ರದೇಶದಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗುತ್ತೆ. ಇದಕ್ಕೆ ಸುಮಾರು 6-8 ಕೋಟಿ ರೂಪಾಯಿ ವೆಚ್ಚವಾಗುತ್ತೆ.

– ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 12 ಬೆಡ್​ಗಳು ಇರುತ್ತವೆ. ತಾಯಿ-ಮಗು ವಿಭಾಗ ಇರುತ್ತೆ. ಅದಕ್ಕೆ ಶೇ.30 ರಷ್ಟು ಜಾಗ ಮೀಸಲಿಡಲಾಗುತ್ತೆ.

– ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬೊರೇಟರಿ ಇರುತ್ತೆ. ಶುಗರ್​ ಟೆಸ್ಟ್​, ಬ್ಲಡ್ ಟೆಸ್ಟ್ ಸೇರಿದಂತೆ ವಿವಿಧ ಟೆಸ್ಟ್​ಗಳನ್ನ ಉಚಿತವಾಗಿ ಮಾಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತೆ.

– 80 ಸಾವಿರ ಜನಸಂಖ್ಯೆಗೆ ಒಂದರಂತೆ ಇರುವ ಸಮುದಾಯ ಆರೋಗ್ಯ ಕೇಂದ್ರವನ್ನು ಕೂಡ ಮೇಲ್ದರ್ಜೆಗೇರಿಸಲಾಗುವುದು.

– ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳನ್ನ ಅಭಿವೃದ್ಧಿಪಡಿಸಲಾಗುವುದು.

– 200 ಹಾಸಿಗೆಗಳ ಜಿಲ್ಲಾಸ್ಪತ್ರೆಗಳು ಮುಂದಿನ ದಿನಗಳಲ್ಲಿ 500-700 ಹಾಸಿಗೆಯ ಆಸ್ಪತ್ರೆಯಾಗಿ ಅಭಿವೃದ್ಧಿಯಾಗಲಿವೆ.

– ಆಯಾ ಜಿಲ್ಲೆಯಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರೆಯುವತೆ ಮಾಡುವ ಉದ್ದೇಶ ಹೊಂದಿದ್ದೇವೆ.

– ಮುಂದಿನ ಬಜೆಟ್​​ನಲ್ಲಿ ಇದಕ್ಕೆ ಹಣವನ್ನ ಮೀಸಲಿಡಲಾಗುತ್ತೆ.

-masthmagaa.com

Contact Us for Advertisement

Leave a Reply