ಯುಕ್ರೇನ್‌ನಿಂದ ಬೇಗ ಹೊರಡಿ ಅಂತ ತನ್ನ ಪ್ರಜೆಗಳಿಗೆ ಆದೇಶಿಸಿದ ಭಾರತ!

masthmagaa.com:

ರಷ್ಯಾ-ಯುಕ್ರೇನ್‌ ವಾರ್‌ ತೀವ್ರಗಿಳ್ಳುತ್ತಿರೊ ಹಿನ್ನಲೆಯಲ್ಲಿ ಯುಕ್ರೇನ್‌ಗೆ ಪ್ರಯಾಣಿಸೋದು ಬೇಡ ಅಂತ ಭಾರತ ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಈ ಬಗ್ಗೆ ಯುಕ್ರೇನ್‌ನಲ್ಲಿರೋ ಭಾರತೀಯ ರಾಯಭಾರ ಕಚೇರಿ ತನ್ನ ಟ್ವಿಟರ್‌ನಲ್ಲಿ ಸೂಚಿಸಿದೆ. ಜೊತೆಗೆ ಯುಕ್ರೇನ್‌ನಲ್ಲಿರೋ ಭಾರತೀಯ ನಾಗರಿಕರು ಅಲ್ಲಿಂದ ನಿಮಗೆ ಲಭ್ಯವಾಗೋ ಕನೆಕ್ಟಿವಿಟಿ ಮೂಲಕ ಆದಷ್ಟು ಬೇಗ ಹೊರಡಿ ಅಂತ ತಿಳಿಸಿದೆ. ಇತ್ತ ರಷ್ಯಾ ತನ್ನ ಟೆರಿಟರಿಗೆ ಸೇರಿಸಿಕೊಂಡಿರೊ ಖೆರ್ಸೋನ್‌ ಸಂಪೂರ್ಣ ಯುದ್ಧ ಭೂಮಿ ಆಗೊದ್ರೊಳಗೆ ಜೀವ ಉಳಿಸಿಕೊಳ್ಳಲು ಜನ ಪಲಾಯನ ಮಾಡ್ತಿದಾರೆ. ಈಗಾಗಲೇ ಡಾನ್‌ಬಾಸ್‌ ಮತ್ತು ಯುಕ್ರೇನ್‌ನ ಆಗ್ನೇಯ ಪ್ರದೇಶಗಳ ಸುಮಾರು 50 ಲಕ್ಷ ನಿವಾಸಿಗಳು ರಷ್ಯಾದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಅಂತ ರಷ್ಯಾ ಸೆಕ್ರಟರಿ ಹೇಳಿದ್ದಾರೆ. ಇನ್ನೊಂದ್‌ ಕಡೆ ಯುಕ್ರೇನ್‌ಗೆ ವೆಪನ್ಸ್‌ ಕಳಿಸಲ್ಲ ಅಂತ ಇಸ್ರೇಲ್ ಹೇಳಿದೆ. ಯುಕ್ರೇನ್‌ನಲ್ಲಿ ಪಡೆಗಳನ್ನು ಹೆಚ್ಚಿಸೋ ಇಸ್ರೇಲ್‌ ಕ್ರಮದಿಂದ ರಿಲೆಶನ್‌ಶಿಪ್‌ ಡ್ಯಾಮೇಜ್‌ ಆಗುತ್ತೆ ಅಂತ ರಷ್ಯಾ ಎಚ್ಚರಿಸಿತ್ತು. ಇದ್ರ ಬೆನ್ನಲ್ಲೇ ಇಸ್ರೇಲ್‌ ಈ ಕ್ರಮ ಕೈಗೊಂಡಿದೆ. ಇದರೆಲ್ಲರ ನಡುವೆ ಯುಕ್ರೇನ್‌ನ ಪ್ರತಿದಾಳಿ ಹೆಚ್ಚುತ್ತಿದ್ದಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುಕ್ರೇನ್‌ನಿಂದ ವಶಪಡಿಸಿಕೊಂಡಿರೊ 4 ಪ್ರದೇಶಗಳಲ್ಲಿ ಸೇನಾಡಳಿತವನ್ನ ಹೇರಿದ್ದಾರೆ. ತನ್ನ ಗಡಿ ಪ್ರದೇಶಗಳಲ್ಲಿ ಅಧಿಕಾರಿಗಳನ್ನೂ ಹೆಚ್ಚಿಸಿದೆ. ರಷ್ಯಾದ ಭವಿಷ್ಯವನ್ನು ರಕ್ಷಿಸಲು ನಾವು ಕೆಲಸ ಮಾಡುತ್ತಿದ್ದೇವೆ ಅಂತ ಪುಟಿನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply