ವಾಸಕ್ಕೆ ರೆಡಿಯಾಗ್ತಿದ್ಯಾ ಶುಕ್ರ ಗ್ರಹ? ಅಲ್ಲಿ ಆಗ್ತಿರೋದೇನು?

masthmagaa.com:

ಭೂಮಿಗೆ ಹತ್ತಿರದ ಗ್ರಹವಾದ ಶುಕ್ರದಲ್ಲಿ ಜೀವಿಗಳು ವಾಸಿಸಲು ಯೋಗ್ಯನಾ ಅಂತ ನಡೆಸಲಾದ ಸಂಶೋಧನೆಯಿಂದ ವಿಜ್ಞಾನಿಗಳು ಫುಲ್ ಉತ್ಸುಕರಾಗಿದ್ದಾರೆ. ಕಾರ್ಬನ್ ಡೈಆಕ್ಸೈಡ್​ನಿಂದ ತುಂಬಿದ ವಾತಾವರಣ, ಪಾದರಸವನ್ನೂ ಕರಗಿಸಬಲ್ಲ ತಾಪಮಾನದ ನಡುವೆಯೂ ಈ ಗ್ರಹದ ಮೋಡದಲ್ಲಿ ವಿಜ್ಞಾನಿಗಳಿಗೆ ಜೀವದ ಸೆಲೆಗೆ ಸಾಕ್ಷ್ಯ ಸಿಕ್ಕಿದೆ. ಕಾರ್ಡಿಫ್ ಯೂನಿವರ್ಸಿಟಿ, ಎಐಟಿ, ಕೆಂಬ್ರಿಡ್ಜ್​ ಯುನಿವರ್ಸಿಟಿಯ ತಜ್ಞರು ಶುಕ್ರಗ್ರಹದ ರಾಸಾಯನಿಕ ಪ್ರಕ್ರಿಯೆ ಕುರಿತು ಅಧ್ಯಯನ ನಡೆಸಿದ್ದಾರೆ. ಇದ್ರ ಪ್ರಕಾರ ಶುಕ್ರಗ್ರಹದಲ್ಲಿ ನಡೆಯೋ ರಾಸಾಯನಿಕ ಪ್ರಕ್ರಿಯೆ ಅಮೋನಿಯಾ ಸುತ್ತಮುತ್ತ ಇರೋ ಸಲ್ಫ್ಯೂರಿಕ್ ಆಸಿಡ್ ಅಂಶವನ್ನು ನಾಶ ಮಾಡುತ್ತೆ. ಅಸಿಡಿಕ್ ಮಟ್ಟ ಝೀರೋಗೆ ಬರಲಿದ್ದು, ಇದ್ರಿಂದ ಶುಕ್ರಗ್ರಹ ಜೀವಿಗಳ ವಾಸಕ್ಕೆ ಯೋಗ್ಯವಾಗುತ್ತೆ ಅಂತ ತಜ್ಞರು ವಾದಿಸಿದ್ದಾರೆ. ಅಂದಹಾಗೆ 1970ರಲ್ಲಿ ಇಲ್ಲಿ ಮೊದಲ ಬಾರಿಗೆ ಅಮೋನಿಯಾವನ್ನು ಪತ್ತೆಹಚ್ಚಲಾಗಿತ್ತು. ಈ ಅಮೋನಿಯಾದ ಬಗ್ಗೆ ಇನ್ನೂ ಕೂಡ ವಿಜ್ಞಾನಿಗಳಲ್ಲಿ ಗೊಂದಲ ಇದೆ. ಇದೀಗ ಸಂಶೋಧನೆ ನಡೆಸಿರೋ ತಜ್ಞರು ಅದು ಯಾವುದೇ ಜ್ವಾಲಾಮುಕಿ ಅಥವಾ ಸಿಡಿಲಿನಿಂದ ಉತ್ಪತ್ತಿಯಾಗಿದ್ದಲ್ಲ.. ಜೈವಿಕವಾಗಿಯೇ ಉತ್ಪತ್ತಿಯಾಗಿರಬಹುದು. ನಮಗೆ ಗೊತ್ತಿರೋ ಪ್ರಕಾರ ಶುಕ್ರನ ವಾತಾವರಣದಲ್ಲಿ ಯಾವುದೇ ಜೀವ ಸರ್ವೈವ್ ಆಗಲು ಸಾಧ್ಯವಿಲ್ಲ. ಆದ್ರೆ ನಮಗೆ ಗೊತ್ತಿಲ್ಲದಂತೆ ಅಲ್ಲಿ ಯಾವುದೋ ಜೀವಿಗಳಿದ್ದು, ಅವುಗಳೇ ಈ ರಾಸಾಯನಿಕ ಕ್ರಿಯೆ ನಡೆಸಿ, ಶುಕ್ರ ಗ್ರಹವನ್ನು ಜೀವಿಗಳಿಗೆ ಯೋಗ್ಯವಾದ ಗ್ರಹವನ್ನಾಗಿ ಮಾಡ್ತಿರಬಹುದು ಅಂತ ಹೇಳಿದ್ದಾರೆ. 2023ರಲ್ಲಿ ಶುಕ್ರಗ್ರಹದಲ್ಲಿ ಇರಬಹುದಾದ ಜೀವಿಗಳ ಕುರಿತು ಸಂಶೋಧನೆಗೆ ಮಿಷನ್ ಲಾಂಚ್ ಮಾಡಲಾಗ್ತಿದೆ. ಅದ್ರಲ್ಲಿ ನಮ್ಮ ಊಹೆ ನಿಜನಾ ಸುಳ್ಳ ಅಂತ ಗೊತ್ತಾಗುತ್ತೆ. ಒಂದು ವೇಳೆ ನಿಜವಾಗಿದ್ರೆ ಅವು ಭೂಮಿಯಲ್ಲಿರೋ ಬ್ಯಾಕ್ಟೀರಿಯಾದಂತೆ ಸೂಕ್ಷ್ಮಜೀವಿಯೇ ಆಗಿರಬಹುದು ಅಂತ ಅಭಿಪ್ರಾಯಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply