ಧೋನಿ ಮಗಳಿಗೆ ಜೆರ್ಸಿ ಕಳುಹಿಸಿದ ಮೆಸ್ಸಿ! ಫೋಟೊ ವೈರಲ್‌!

masthmagaa.com:

ಕತಾರ್‌ನಲ್ಲಿ ನಡೆದ ಫಿಫಾ ವರ್ಲ್ಡ್‌ಕಪ್‌ನಲ್ಲಿ ಅರ್ಜಂಟೀನಾ ತಂಡ ಭರ್ಜರಿಯಾಗಿ ಗೆದ್ದು ಬೀಗಿತ್ತು. ಫಿಫಾ ವಿಶ್ವಕಪ್‌ ಮುಗಿದು ವಾರದ ಮೇಲಾದ್ರು ಇನ್ನು ಫುಟ್‌ಬಾಲ್‌ ಫೀವರ್‌ ಕಡಿಮೆಯಾಗಿಲ್ಲ. ವಿಶ್ವಕಪ್‌ ವೇಳೆ ಅರ್ಜಂಟೀನಾದ ಸ್ಟಾರ್‌ ಆಟಗಾರ ಲಿಯೋನಲ್‌ ಮೆಸ್ಸಿ ಉಳಿದುಕೊಂಡಿದ್ದ ರೂಮ್‌ನ್ನ ಇದೀಗ ಚಿಕ್ಕದಾಗಿ ಮ್ಯೂಸಿಯಂ ಮಾಡಲಾಗುತ್ತೆ ಅಂತ ಕತಾರ್‌ ಹೇಳಿದೆ. ಮೆಸ್ಸಿ ಇದ್ದ ರೂಮ್‌ನ್ನ ಮ್ಯೂಸಿಯಂ ಮಾಡೋಕೆ ಕತಾರ್‌ ವಿವಿ ಪ್ಲಾನ್‌ ಮಾಡಿದ್ದು, ಅಭಿಮಾನಿಗಳು ಮತ್ತು ದೇಶಕ್ಕೆ ಬರೋ ಪ್ರಯಾಣಿಕರಿಗೆ ಭೇಟಿ ನೀಡೋಕೆ ಅವಕಾಶ ಕಲ್ಪಿಸಲಾಗುತ್ತೆ ಅಂತ ಹೇಳಲಾಗಿದೆ. ಭಾರತದ ಕ್ರಿಕೆಟ್‌ ದಿಗ್ಗಜ ಮಹೇಂದ್ರ ಸಿಂಗ್‌ ಧೋನಿ ಮಗಳಿಗೆ ಸೈನ್‌ ಮಾಡಿದ ತಮ್ಮ ಜೆರ್ಸಿಯನ್ನ ಪುಟ್ಬಾಲ್‌ ತಾರೆ ಮೆಸ್ಸಿ ಕಳುಹಿಸಿದ್ದಾರೆ. ಈ ಜೆರ್ಸಿಯನ್ನ ಧೋನಿ ಮಗಳು ಹಾಕೊಂಡಿರೋ ಪೋಟೋ ಫುಲ್‌ ವೈರಲ್‌ ಆಗಿದೆ.

-masthmagaa.com

Contact Us for Advertisement

Leave a Reply