ಕಾಶ್ಮೀರ ಕಳೆದುಕೊಂತಾ I.N.D.I.A? ನ್ಯಾಷನಲ್‌ ಕಾನ್ಫರೆನ್ಸ್‌ ಏಕಾಂಗಿ ಸಮರ!

masthmagaa.com:

ಬಂಗಾಳ, ಪಂಜಾಬ್‌ ನಂತರ ಇದೀಗ I.N.D.I ಮೈತ್ರಿ ಕೂಟಕ್ಕೆ ಕಾಶ್ಮೀರದಿಂದ ಶೀತಲವಾದ ಹೊಡೆತ ಬಿದ್ದಿದೆ. ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರುಖ್‌ ಅಬ್ದುಲ್ಲಾ, ಲೋಕಸಭಾ ಚುನಾವಣೆಯಲ್ಲಿ ಅವರ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೆ ಅಂದಿದ್ದಾರೆ. ಅಲ್ಲದೆ ಫ್ಯೂಚರ್‌ನಲ್ಲಿ ಬಿಜೆಪಿ ನೇತೃತ್ವದ NDA ಕೂಟಕ್ಕೆ ಸೇರಬಹುದು ಅನ್ನೋ ಹಿಂಟ್‌ ಕೊಟ್ಟಿದ್ದಾರೆ.

ಮತ್ತೊಂದು ಕಡೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂದೇಶ್‌ಖಾಲಿ ಗಲಭೆಗೆ RSS ಕಾರಣ ಅಂತ ಹೇಳಿಕೆ ಕೊಟ್ಟಿದ್ದಾರೆ. TMC ನಾಯಕ ಶಹಜಾನ್‌ ಶೇಖ್‌ ಮೇಲೆ ದೌರ್ಜನ್ಯದ ಆರೋಪ ಇರೋ ಈ ಕೇಸ್‌ನಲ್ಲಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತಗೊಳ್ತೀವಿ ಅಂತ ಮಮತಾ ಹೇಳಿದ್ದಾರೆ. ಕೇಸ್‌ಗೆ ಸಂಬಂಧಿಸಿದಂತೆ ರಾಜ್ಯದ ಮಹಿಳಾ ಆಯೋಗ ಹಾಗೂ ಪೊಲೀಸರ ಸ್ಪೆಷಲ್‌ ಟೀಂ ತನಿಖೆ ಮಾಡ್ತಾ ಇದೆ. 17 ಜನರನ್ನ ಈಗಾಗ್ಲೆ ಅರೆಸ್ಟ್‌ ಮಾಡಲಾಗಿದೆ ಅಂತ ಮಮತಾ ಹೇಳಿದ್ದಾರೆ.

ಇತ್ತ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್‌ ಚವ್ಹಾಣ್‌ ರಾಜ್ಯಸಭೆಗೆ ಚುನಾವಣೆಗೆ ನಾಮಿನೇಷನ್‌ ಸಲ್ಲಿಸಿದ್ದಾರೆ.

-masthmagaa.com

Contact Us for Advertisement

Leave a Reply