ಮಣಿಪುರ ಗಲಭೆಗೆ ಮಣಿಪುರ ಸರ್ಕಾರವೇ ಕಾರಣ: ಅಸ್ಸಾಂ ರೈಫಲ್ಸ್‌

masthmagaa.com:

ಮಣಿಪುರದಲ್ಲಿ ನಡೀತಿರೋ ಹಿಂಸಾಚಾರಕ್ಕೆ ಮಣಿಪುರ ಸರ್ಕಾರವೇ ಕಾರಣ ಅಂತ ಅಲ್ಲಿನ ಅರೆಸೇನಾ ಪಡೆ ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ಆರೋಪ ಮಾಡಿ ವರದಿ ಮುಂದಿಟ್ಟಿದ್ದಾರೆ. ಮಣಿಪುರ ಸಿಎಂ ಎನ್‌. ಬಿರೇನ್‌ ಸಿಂಗ್‌ ಅವ್ರ ರಾಜಕೀಯ ಹಿತಾಸಕ್ತಿಯಿಂದಾಗಿ ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾಗ್ತಿದೆ. ಬಿರೇನ್‌ ಸಿಂಗ್‌ ಕುಕಿ ಸಮುದಾಯವನ್ನ ಟಾರ್ಗೆಟ್‌ ಮಾಡ್ತಿದ್ದಾರೆ. ಮಣಿಪುರ ಸರ್ಕಾರ ಕದ್ದುಮುಚ್ಚಿ ಅಲ್ಲಿನ ಗಲಭೆಗೆ ಸಪೋರ್ಟ್‌ ನೀಡ್ತಿದೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವಂತೆ ಮಾಡ್ತಿದೆʼ ಅಂತ ಆರೋಪ ಮಾಡಿದ್ದಾರೆ. ಜೊತೆಗೆ ʻಹಲವು ಸಮಸ್ಯೆಗಳು ಜಾಸ್ತಿಯಾಗೋಕೆ ಬಿಜೆಪಿ ನೇತೃತ್ವದ ಸರ್ಕಾರದ ನಿಲುವೇ ಕಾರಣ. ಅದ್ರಿಂದ್ಲೇ ಸಮುದಾಯಗಳ ನಡುವೆ ಒಡಕು ಉಂಟಾಯ್ತುʼ ಅಂತೇಳಿದೆ. ಇತ್ತ ಮಣಿಪುರದ ಗಲಭೆ ಬಗ್ಗೆ ಮೌನವಾಗಿದ್ದ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಇಂಟರ್‌ವ್ಯೂ ಒಂದ್ರಲ್ಲಿ ಮಾತನಾಡಿ, ಮಣಿಪುರ ಸರ್ಕಾರ ಸರಿಯಾದ ಸಮಯಕ್ಕೆ ಹಸ್ತಕ್ಷೇಪ ಮಾಡಿದ್ರಿಂದ, ಅಲ್ಲಿನ ಪರಿಸ್ಥಿತಿ ಇಂಪ್ರೂವ್‌ ಆಗಿದೆ ಅಂದಿದ್ರು. ಇದ್ರ ಬೆನ್ನಲ್ಲೇ ಈ ವರದಿ ಬಂದಿದ್ದು, ಬಹಳ ಕುತೂಹಲ ಕೆರಳಿಸಿದೆ.

-masthmagaa.com

Contact Us for Advertisement

Leave a Reply