ಜುಲೈ 20ರಿಂದ ಮುಂಗಾರು ಅಧಿವೇಶನ ಆರಂಭ!

masthmagaa.com:

ಇತ್ತ ರಾಜ್ಯ ಕಾಂಗ್ರೆಸ್‌ ಬಜೆಟ್‌ ಅಧಿವೇಶನಕ್ಕೆ ರೆಡಿಯಾಗ್ತಿದ್ರೆ, ಅತ್ತ ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಡೇಟ್‌ ಫಿಕ್ಸ್ ಆಗಿದೆ. ಇದೇ ಜುಲೈ 20ರಿಂದ ಆರಂಭವಾಗಿ, ಆಗಸ್ಟ್‌ 11ರವರೆಗೆ ನಡೆಯಲಿದೆ ಅಂತ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಅನೌನ್ಸ್‌ ಮಾಡಿದ್ದಾರೆ. ಸಂಸತ್ತಿನ ಉಭಯ ಸದನಗಳಲ್ಲಿ ಗುಣಮಟ್ಟದ ಚರ್ಚೆ ನಡೆಸುವಂತೆ ಎಲ್ಲ ಪಕ್ಷಗಳಿಗೂ ನೀಡುವಂತೆ ಕೇಂದ್ರ ಸಚಿವರು ಒತ್ತಾಯಿಸಿದ್ದಾರೆ. ಅಧಿವೇಶನ ಒಟ್ಟು 23 ದಿನಗಳ ಕಾಲ ನಡೆಯಲಿದ್ದು, 17 ಕಲಾಪಗಳು ಇರಲಿವೆ ಅಂತ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇನ್ನು ಅಧಿವೇಶನ ಹಳೆ ಸಂಸತ್‌ನಲ್ಲಿ ಆರಂಭವಾಗಿ, ಹೊಸ ಸಂಸತ್‌ನಲ್ಲಿ ಮುಕ್ತಾಯವಾಗಲಿದೆ ಅಂತ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply