ರಾಹುಲ್‌ ಗಾಂಧಿಗೆ ಮಾತಿನಲ್ಲೇ ಪಂಚ್‌ ಕೊಟ್ಟ ಓವೈಸಿ ಹೇಳಿದ್ದೇನು?

masthmagaa.com:

ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ರ್ಯಾಲಿ ನಡೆಸುತ್ತಿದ್ದಾರೆ. ನಿನ್ನೆ ಕಾರ್ಯಕ್ರಮದಲ್ಲಿ ಮಾತಾಡಿರುವ ರಾಹುಲ್‌, ಕಾಂಗ್ರೆಸ್‌ನ ಸೋಲಿಸಲು ಬಿಜೆಪಿ, AIMIM ಹಾಗೂ BRS ಒಂದಾಗಿವೆ ಅಂತ ಹೇಳಿದ್ದಾರೆ. ಜೊತೆಗೆ AIMIM ಪಕ್ಷವನ್ನ ಬಿಆರ್‌ಎಸ್‌ ಪಕ್ಷದ ಬಿ ಟೀಮ್‌ ಅಂತ ಕರೆದಿದ್ದಾರೆ. ಇದಕ್ಕೆ ರಿಯಾಕ್ಟ್‌ ಮಾಡಿರುವ AIMIM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ, ಮೊದಲೇ ಪ್ರೆಡಿಕ್ಟ್‌ ಮಾಡಿದಂತೆ ರಾಹುಲ್‌ ಬಾಬಾ ಅವರ ಬಿ ಟಿಂ ಗೋಳಾಟ ಶುರುವಾಯ್ತು ಅಂತ ಟಾಂಟ್‌ ಕೊಟ್ಟಿದ್ದಾರೆ. ಅಲ್ದೆ ತೆಲಂಗಾಣದಲ್ಲಿ ಬಿ-ಟೀಮ್‌ಗಳಿದ್ದರೆ ಬಿಜೆಪಿ ಯಾಕೆ ವೀಕ್‌ ಆಗ್ತಿತ್ತು ಅಂತ ಪ್ರಶ್ನಸಿದ್ದಾರೆ. ಜೊತೆಗೆ ಅಮೇಠಿ ಕ್ಷೇತ್ರವನ್ನು ಬಿಜೆಪಿಗೆ ರಾಹುಲ್​​ ಯಾಕೆ ಉಡುಗೊರೆಯಾಗಿ ಕೊಟ್ಟರು? ಬಾಬಾ ಅವರೇ, ಸೇಫ್‌ ಸೀಟ್‌ಗಾಗಿ ನೀವ್ಯಾಕೆ ವಯನಾಡಿಗೆ ಹೋಗಬೇಕಾಗಿತ್ತು? ಅಂತ ಪ್ರಶ್ನಿಸಿದ್ದಾರೆ. ಇದೇ ವೇಳೆ ತೆಲಂಗಾಣ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟು ಗೆಲ್ಲುವ ಸ್ಥಾನಗಳಿಗಿಂತ ಹೆಚ್ಚಿನ ಸೀಟುಗಳು ತಮ್ಮ ರಾಯಲ್ ಎನ್‌ಫೀಲ್ಡ್‌ನಲ್ಲಿವೆ ಅಂತ ಓವೈಸಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply