ಬೆಂಗಳೂರು ಸ್ಪೋಟದ ಶಂಕಿತನ ಗುರುತು ಪತ್ತೆ: NIA ಮೂಲಗಳು

masthmagaa.com:

ಬೆಂಗಳೂರು ರಾಮೇಶ್ವರಂ ಕೆಫೆ ಸ್ಪೋಟದ ಶಂಕಿತನ ಐಡೆಂಟಿಟಿಯನ್ನ NIA ಕೊನೆಗೂ ಪತ್ತೆ ಮಾಡಿದೆ. ಶಂಕಿತ ದಾಳಿಕೋರನನ್ನ ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಮುಸಾವಿರ್‌ ಹುಸೇನ್‌ ಶಾಜೀಬ್‌ ಅಂತ ಗುರುತಿಸಲಾಗಿದೆ. ಬರೋಬ್ಬರಿ 1,000 CCTV ಫುಟೇಜ್‌ಗಳನ್ನ ಪರಿಶೀಲಿಸಿದ ನಂತ್ರ ಕೊನೆಗೂ ಈತನ ಗುರುತು ಪತ್ತೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಈತ ಧರಿಸಿದ್ದ ಅಪರೂಪದ ಲಿಮಿಟೆಡ್‌ ಎಡಿಷನ್‌ ಬೇಸ್‌ಬಾಲ್‌ ಕ್ಯಾಪ್‌. ಈ ಒಂದು ಸುಳಿವು ಹಿಡ್ಕೊಂಡು ಹೊರಟ NIAಗೆ ಇದೀಗ ಶಂಕಿತನ ಹಿಸ್ಟ್ರೀನೇ ಸಿಕ್ಕಿದೆ. ಈ ಬೇಸ್‌ಬಾಲ್‌ ಕ್ಯಾಪ್‌ನ್ನ ಚೆನೈನ ಮಾಲ್‌ ಒಂದ್ರಲ್ಲಿ ಖರೀದಿಸಲಾಗಿದ್ದು, ಇಲ್ಲಿಗೆ ರೀಚ್‌ ಆಗಿದ್ದ NIA ತಂಡ ಅಲ್ಲಿನ CCTV ಪರಿಶೀಲಿಸಿದಾಗ ಈ ವಿಚಾರ ಬಯಲಾಗಿದೆ. ಜನವರಿಯಲ್ಲಿ ಈ ಕ್ಯಾಪ್‌ ಖರೀದಿಸಲಾಗಿತ್ತು ಅಂತ ಗೊತ್ತಾಗಿದೆ. ಅಲ್ದೇ ಈತ ಜನವರಿಯಿಂದ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಚೆನೈನಲ್ಲೇ ಇದ್ದ ಅನ್ನೋದೂ ಬಯಲಾಗಿದೆ. ಜೊತೆಗೆ ಚೆನೈನಲ್ಲಿ ನಡೆದ ತನಿಖೆಯಲ್ಲಿ ಶಂಕಿತ ಶಾಜೀಬ್‌ನ ಸಹಚರನೊಬ್ಬನ ಗುರುತು ಕೂಡ ಪತ್ತೆಯಾಗಿದೆ. ಈತನೂ ತೀರ್ಥಹಳ್ಳಿ ಮೂಲದವನಾಗಿದ್ದು, ಅಬ್ದುಲ್‌ ಮತೀನ್‌ ತಾಹಾ ಅಂತ ಗುರುತಿಸಲಾಗಿದೆ. ಈತ ಈ ಹಿಂದೆ ತಮಿಳುನಾಡಿನ ಪೊಲೀಸ್‌ ಇನ್ಸ್‌ಪೆಕ್ಟರ್‌ ಒಬ್ರನ್ನ ಹತ್ಯೆ ಮಾಡಿದ್ದು, ಸದ್ಯ ಚೆನೈ ಪೊಲೀಸರ ವಾಂಟೆಡ್‌ ಲಿಸ್ಟ್‌ನಲ್ಲಿದ್ದಾನೆ. ಇನ್ನೂ ಶಾಕಿಂಗ್‌ ಅನ್ನೋ ಹಾಗೇ ಆರೋಪಿ ಅಬ್ದುಲ್‌ ಮತೀನ್‌ ತಾಹಾ ಶಿವಮೊಗ್ಗದ ಐಎಸ್‌ ಘಟಕಕ್ಕೆ ಸೇರಿದ್ದ. ಅಷ್ಟೇ ಅಲ್ದೇ ಬೆಂಗಳೂರಿನ ಕೆಫೆ ಸ್ಫೋಟಗೊಳ್ಳೋ ಒಂದು ದಿನದ ಹಿಂದೆ ಈತ ಕೆಫೆಯ ಸುತ್ತಮುತ್ತಲಿನ ಏರಿಯಾ ಬಗ್ಗೆ ಮಾಹಿತಿ ಕೂಡ ಕಲೆಹಾಕಿದ್ದ ಅಂತಾನೂ ತಿಳಿದು ಬಂದಿದೆ. ಇನ್ನು ಶಂಕಿತ ಮುಸಾವಿರ್‌ ಹುಸೇನ್‌ ಶಾಜೀಬ್‌ ಕೆಫೆ ಸ್ಫೋಟದ ವೇಳೆ ಧರಿಸಿದ್ದ ಬೇಸ್‌ಬಾಲ್‌ ಕ್ಯಾಪ್‌ನ್ನ ಆರೋಪಿ ಮತೀನ್‌ ತಾಹಾ ಚೆನ್ನೈ ಬಳಿಯ ತಿರುವಲ್ಲಿಕೇಣಿ ಅಥ್ವಾ ಟ್ರಿಪ್ಲಿಕೇನ್‌ನಲ್ಲಿರೋವಾಗ ಖರೀದಿಸಿದ್ದ ಅಂತಾನೂ ಗೊತ್ತಾಗಿದೆ. ಅದೇ ಕ್ಯಾಪ್‌ನ್ನ ಶಂಕಿತ ಶಾಜೀಬ್‌ ಸ್ಫೋಟಕ ಇಡೋ ವೇಳೆ ಧರಿಸಿದ್ದು… NIA ತಂಡ ತನಿಖೆ ಭಾಗವಾಗಿ ಈ ಕ್ಯಾಪ್‌ನ್ನ ಫೋರೆನ್ಸಿಕ್‌ ಲ್ಯಾಬ್‌ಗೆ ಕಳುಹಿಸಿತ್ತು. ಇದೀಗ ಫೋರೆನ್ಸಿಕ್‌ ರಿಪೋರ್ಟ್‌ ಕೂಡ ಹೊರಬಿದ್ದಿದ್ದು, ಕ್ಯಾಪ್‌ನಲ್ಲಿದ್ದ ಹೇರ್‌ ಸ್ಯಾಂಪಲ್ಸ್‌ನ ಡಿಎನ್‌ಎ.. ಶಂಕಿತ ಶಾಜೀಬ್‌ನ ಪೋಷಕರೊಂದಿಗೆ ಮ್ಯಾಚ್‌ ಆಗಿದೆ ಅಂತ NIA ಮೂಲಗಳು ಬಹಿರಂಗ ಪಡಿಸಿವೆ.

-masthmagaa.com

Contact Us for Advertisement

Leave a Reply