ನಿತೀಶ್‌ಗೆ ಸ್ವಪಕ್ಷೀಯರಿಂದಲೇ ಶಾಕ್‌! ಮಣಿಪುರದ 6 ಶಾಸಕರಲ್ಲಿ 5 ಬಿಜೆಪಿಗೆ ಜಂಪ್‌!

masthmagaa.com:

ಬಿಹಾರದಲ್ಲಿ RJD ಜೊತೆಗೆ ಕೈ ಜೋಡಿಸಿ BJP ಗೆ ಶಾಕ್‌ ಕೊಟ್ಟಿದ್ದ ನಿತೀಶ್‌ ಕುಮಾರ್‌ ಗೆ ಈಗ ಸ್ವಪಕ್ಷೀಯರೇ ಬಿಗ್ ಸರ್ಪೈಸ್‌ ಕೊಟ್ಟಿದ್ದಾರೆ. ಮಣಿಪುರದಲ್ಲಿ ನಿತೀಶ್‌ ಪಕ್ಷದ 6 ಶಾಸಕರ ಪೈಕಿ 5 ಮಂದಿ BJPಗೆ ಜಂಪ್‌ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ JDU ಪಕ್ಷದ ಜಂಘಾಬಲವೇ ಹುದುಗಿಹೋಗಿದೆ. ಯಾಕಂದ್ರೆ 60 ಸೀಟುಗಳ ಮಣಿಪುರದ ವಿಧಾನಸಭೆಯಲ್ಲಿ ಜೆಡಿಯು BJP, NPP ಬಳಿಕ ಮೂರನೇ ಅತಿದೊಡ್ಡ ಪಕ್ಷವಾಗಿತ್ತು.ಇದೀಗ ಮಣಿಪುರದ ಬಹುತೇಕ ಜೆಡಿಯು ಪಕ್ಷವೇ ಬಿಜೆಪಿಗೆ ವಿಲೀನವಾಗಿದೆ. ಇದನ್ನ ಮಣಿಪುರ ವಿಧಾನಸಭೆಯ ಕಾರ್ಯದರ್ಶಿ ಕೆ.ಮೇಘಜಿತ್‌ ಸಿಂಗ್‌ ಕನ್ಫಮ್‌ ಮಾಡಿದ್ದು ಈ 5 ಮಂದಿ ಜೆಡಿಯು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದನ್ನು ಸ್ಪೀಕರ್‌ ಅನುಮೋದಿಸಿದ್ದಾರೆ ಅಂತ ಹೇಳಿದ್ದಾರೆ. ಅಂದ್ಹಾಗೆ ಈ ಈಶಾನ್ಯ ರಾಜ್ಯಗಳಲ್ಲಿ ಅವರ ಪಕ್ಷದ ಶಾಸಕರೇ ನಿತೀಶ್‌ಗೆ ಆಘಾತ ಕೊಡ್ತಿರೋದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಅಂದ್ರೆ 2020ರಲ್ಲಿ ಕೂಡ ಅರುಣಾಚಲ ಪ್ರದೇಶದಲ್ಲಿ 7 ಶಾಸಕರ ಪೈಕಿ 6 ಮಂದಿ ಬಿಜೆಪಿಗೆ ಹೋಗಿದ್ರು. ಉಳಿದಿದ್ದಒಬ್ರು ಕೂಡ ಕಳೆದ ವಾರ ಬಿಜೆಪಿ ಸೇರಿಕೊಂಡಿದ್ದಾರೆ. ಬಹುಶಃ ಎಲ್ಲ ಬೆಳವಣಿಗೆಗಳು ಕೂಡ ನಿತೀಶ್‌ NDA ಬಿಟ್ಟು ಬರೋಕೆ ಕಾರಣವಾಗಿರಬಹುದು.

-masthmagaa.com

Contact Us for Advertisement

Leave a Reply