ರಶೀದ್‌ ಖಾನ್‌ಗೆ ಯಾವುದೇ ಬಹುಮಾನ ಕೊಟ್ಟಿಲ್ಲ: ವದಂತಿಯನ್ನ ಅಲ್ಲಗೆಳೆದ ರತನ್‌ ಟಾಟಾ

masthmagaa.com:

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಹಾಗೂ ಖ್ಯಾತ ಉದ್ಯಮಿಯಾದ ರತನ್‌ ಟಾಟಾ ಅಫ್ಘಾನಿಸ್ತಾನದ ಕ್ರಿಕೆಟ್‌ ಆಟಗಾರ ರಶೀದ್‌ ಖಾನ್‌ಗೆ 10 ಕೋಟಿ ಆಫರ್‌ ಮಾಡಿದ್ದಾರೆ ಅನ್ನೋ ವದಂತಿಯನ್ನ ಇದೀಗ ರತನ್‌ ಟಾಟಾ ಖಂಡಿಸಿದ್ದಾರೆ. ತಮ್ಮ `X’ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರೋ ರತನ್‌ ಟಾಟಾ, ʻನನಗೂ ಕ್ರಿಕೆಟ್‌ಗೂ ಯಾವುದೇ ಕನೆಕ್ಷನ್‌ ಇಲ್ಲ. ಜನರು ವಾಟ್ಸ್ಯಾಪ್‌ನಲ್ಲಿ ಹರಿದಾಡ್ತಾ ಇರೋ ಮೆಸೇಜ್‌ನ್ನ ನಂಬಬಾರ್ದು. ನಾನು ICC (ಅಂತರಾಷ್ಟ್ರೀಯ ಕ್ರಿಕೇಟ್‌ ಮಂಡಳಿ) ಅಥವಾ ಯಾವುದೇ ಕ್ರಿಕೆಟ್‌ ವಿಭಾಗಕ್ಕೆ, ಆಟಗಾರರಿಗೆ ಫೈನ್‌ ಹಾಕಿರೋ ವಿಚಾರವಾಗಿ ಯಾವುದೇ ರೀತಿಯ ಸಲಹೆಗಳನ್ನ ನೀಡಿಲ್ಲ. ಅಲ್ದೆ ಯಾವುದೇ ಕ್ರಿಕೆಟ್‌ ಆಟಗಾರರಿಗೆ ಬಹುಮಾನ ನೀಡೋದಾಗಿ ಹೇಳಿಕೊಂಡಿಲ್ಲ. ಆದ್ರಿಂದ ಈ ವದಂತಿಗಳನ್ನ ನಂಬಬೇಡಿʼ ಅಂತ ಹೇಳಿದ್ದಾರೆ. ಅಂದ್ಹಾಗೆ ವಿಶ್ವಕಪ್‌ 2023ರ ಪಾಕ್‌ ವಿರುದ್ಧದ ಗೆಲುವಿನ ಸಂಭ್ರಮಾಚರಣೆಯಲ್ಲಿ ಭಾರತದ ಧ್ವಜ ಪ್ರದರ್ಶಿಸಿದ್ದಕ್ಕಾಗಿ, ರಶೀದ್‌ ಖಾನ್‌ ಅವ್ರಿಗೆ ICC 50 ಲಕ್ಷ ದಂಡ ವಿಧಿಸಿತ್ತು. ಈ ಬೆನ್ನಲ್ಲೇ, ರತನ್‌ ಟಾಟಾ ಅವ್ರು ರಶೀದ್‌ ಖಾನ್‌ಗೆ 10 ಕೋಟಿ ಬಹುಮಾನ ನೀಡೋದಾಗಿ ಪ್ರತಿಜ್ಞೆ ಮಾಡಿದ್ದಾರೆ ಅನ್ನೋ ವರದಿ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು.

-masthmagaa.com

Contact Us for Advertisement

Leave a Reply