ಇನ್ನಷ್ಟು ಕಡಿಮೆ ಕಚ್ಚಾ ತೈಲ ಉತ್ಪಾದನೆ ಮಾಡೋಕೆ ಒಪೆಕ್+‌ ನಿರ್ಧಾರ!

masthmagaa.com:

ಸೌದಿ ಅರೇಬಿಯಾ, ಓಪೆಕ್‌+ ದೇಶಗಳು ಹಾಗೂ ರಷ್ಯಾ ಒಟ್ಟಿಗೆ ಸೇರಿ ಕಚ್ಚಾ ತೈಲ ಉತ್ಪಾದನೆಯನ್ನ ಇನ್ನಷ್ಟು ಕಡಿಮೆ ಮಾಡೋಕೆ ನಿರ್ಧಾರ ಮಾಡಿವೆ. ಈ ಮೊದಲು ಈ ದೇಶಗಳು ಸುಮಾರು 1 ಮಿಲಿಯನ್‌ ಬ್ಯಾರೆಲ್‌ನಷ್ಟು ಕಡಿಮೆ ತೈಲ ಉತ್ಪಾದನೆ ಮಾಡ್ತೀವಿ ಅಂದಿದ್ರು. ಆದ್ರೆ ಇದೀಗ ಇನ್ನಷ್ಟು ಎಕ್ಸ್‌ಟೆಂಡ್‌ ಮಾಡಿ 2.2 ಮಿಲಿಯನ್‌ ಬ್ಯಾರೆಲ್‌ ಕಡಿಮೆ ತೈಲ ಉತ್ಪಾದನೆ ಮಾಡ್ತೀವಿ ಅಂತ ಓಪೆಕ್‌+ ರಾಷ್ಟ್ರಗಳ ಕಾರ್ಯದರ್ಶಿ ಹೇಳಿದ್ದಾರೆ. ಆಯಿಲ್‌ ಮಾರ್ಕೆಟ್‌ನ್ನ ಬ್ಯಾಲೆನ್ಸ್‌ ಮಾಡೋಕೆ ಈ ನಿರ್ಧಾರ ತೆಗೆದುಕೊಳ್ಳಲಾಗ್ತಿದೆ ಅಂತ ಒಪೆಕ್‌+ ಹೇಳಿದೆ. ಈ ಅನೌನ್ಸ್‌ಮೆಂಟ್‌ ಬೆನ್ನಲ್ಲೇ ಕಚ್ಚಾ ತೈಲದ ಬೆಲೆಯಲ್ಲಿ ಕುಸಿತ ಕಂಡಿದೆ. ಜಾಗತಿಕ ಬೆಂಚ್‌ಮಾರ್ಕ್‌ ತೈಲ ಬ್ರೆಂಟ್‌ ಬೆಲೆಯಲ್ಲಿ ಪ್ರರಿ ಬ್ಯಾರೆಲ್‌ಗೆ 0.05% ಕಡಿಮೆಯಾಗಿದ್ರೆ, ಅಮೆರಿಕ್‌ ತೈಲಕ್ಕೆ 0.19% ಕುಸಿದಿದೆ.

-masthmagaa.com

Contact Us for Advertisement

Leave a Reply