ಗೊಂದಲದಲ್ಲಿ ಪಾಕಿಸ್ತಾನ! ಚುನಾವಣೆ ಮತ ಎಣಿಕೆ ಅಂತ್ಯ!

masthmagaa.com:

ಪಾಕ್‌ ಚುನಾವಣೆ ಮುಗಿದು ಎರಡು ದಿನಗಳ ನಂತ್ರ ಕೊನೆಗೂ ಮತ ಎಣಿಕೆ ಇಂದಿಗೆ ಕೊನೆಯಾಗಿದೆ. ಫೈನಲ್‌ ರಿಸಲ್ಟ್‌ ಏನಂತ ಅಧಿಕೃತವಾಗಿ ಅನೌನ್ಸ್‌ ಆಗದಿದ್ರೂ, ಇಮ್ರಾನ್‌ ಖಾನ್‌ರ PTI ಬೆಂಬಲಿತ ಇಂಡಿಪೆಂಡೆಂಟ್‌ ಅಭ್ಯರ್ಥಿಗಳು ಹೆಚ್ಚಿನ ಸೀಟುಗಳಲ್ಲಿ ಗೆದ್ದಿದ್ದಾರೆ… ಒಟ್ಟು 101 ಸೀಟ್‌ಗಳನ್ನ ಗೆದ್ದಿದ್ದಾರೆ ಅಂತ ಪಾಕ್‌ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಉಲ್ಲೇಖವಾಗಿದೆ. ಈ ಮೂಲಕ ನವಾಜ್‌ ಶರೀಫ್‌ರ PML(N) ಪಕ್ಷ ಮೇಜರ್‌ ಪಕ್ಷವಾಗಿ ಬಂದಿಲ್ಲ, ಪಕ್ಷಕ್ಕೆ ಸೋಲಾಗಿದೆ ಅಂತಾನೇ ಹೇಳ್ಬೋದು. ಇನ್ನೊಂದ್ಕಡೆ ಪಾಕ್‌ನ ಕೆಲ ಮತಗಟ್ಟೆಗಳಲ್ಲಿ ಮರು ಮತದಾನ ನಡೆಸೋದಾಗಿ ಅಲ್ಲಿನ ಚುನಾವಣಾ ಆಯೋಗ ಹೇಳಿತ್ತು. ಈ ಮರು ಮತದಾನ ಫೆಬ್ರುವರಿ 15ಕ್ಕೆ ನಡೆಯೋದ್ರಿಂದ, ಫೈನಲ್‌ ರಿಸಲ್ಟ್‌ ಹೊರಬೀಳೋಕೆ ಇನ್ನೂ ಒಂದು ವಾರ ಬೇಕಾಗುತ್ತೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply