ಭಾರತದ ಕ್ರಮಕ್ಕೆ ಅಪಸ್ವರ: ವಾಣಿಜ್ಯ ಸರಕು ಸಾಗಿಸೋ ಹಡಗು ಎಂದ ಪಾಕ್!

masthmagaa.com:

ಚೀನಾದಿಂದ ಪಾಕ್‌ನತ್ತ ಸಾಗ್ತಿದ್ದ ಶಂಕಿತ ಹಡಗನ್ನ ತಡೆಹಿಡಿದ ಭಾರತದ ಕ್ರಮವನ್ನ ಇದೀಗ ಪಾಕಿಸ್ತಾನ ಖಂಡಿಸಿದೆ. ನ್ಯೂಕ್ಲಿಯರ್‌ ಪ್ರೊಗ್ರಾಮ್‌ಗೆ ಬಳಸೋ ಮಷೀನ್‌ಗಳನ್ನ ಪೂರೈಸೋ ಹಡಗು ಇದಲ್ಲ. ಬದಲಿದೆ ಇದು ಚೀನಾದಿಂದ ಕರಾಚಿಗೆ ವಾಣಿಜ್ಯ ಸರಕುಗಳನ್ನ ಸಾಗಾಸೋ ಹಡುಗಾಗಿದೆ. ಹೀಗಾಗಿ ಭಾರತ ನಮ್ಮ ಹಡಗನ್ನೆ ತಡೆದು ಅಂತರಾಷ್ಟ್ರೀಯ ಕಾನೂನನ್ನೆ ಉಲ್ಲಂಘನೆ ಮಾಡಿದೆ ಅಂತ ಪಾಕಿಸ್ತಾನ ಆರೋಪಿಸಿದೆ. ಅಂದ್ಹಾಗೆ ಮಾರ್ಚ್‌ 2 ರಂದು ಮುಂಬೈನ ನವ್ಹಾ ಶೇವಾ ಪೋರ್ಟ್‌ನಲ್ಲಿ ರಾಷ್ಟ್ರೀಯ ಭದ್ರತಾ ಪಡೆ ಈ ಹಡಗನ್ನ ತಡೆದು ಪರಿಶೀಲನೆ ಮಾಡಿತ್ತು. ಈ ವೇಳೆ ನ್ಯೂಕ್ಲಿಯಾರ್‌ ಪ್ರೋಗ್ರಾಮ್‌ಗಳಲ್ಲಿ ಬಳಸುವ Computer Numerical Control ಅನ್ನೋ ಮಷೀನ್‌ ಸೇರಿದಂತೆ 22,180 ಕೆಜಿ ತೂಕದ ಶಂಕಿತ ಸರಕುಗಳು ಪತ್ತೆಯಾಗಿದ್ವು. ಆದ್ರೆ ಪಾಕ್‌ ಮಾತ್ರ ಇದು ವಾಣಿಜ್ಯ ಸರಕುಗಳನ್ನ ಸಾಗಿಸೊ ಹಡಗು ಅಂತೇಳಿ ಭಾರತದ ಕ್ರಮವನ್ನೆ ಪ್ರಶ್ನೆ ಮಾಡಿದೆ.

-masthmagaa.com

Contact Us for Advertisement

Leave a Reply