ʻದಿ ಕೇರಳ ಸ್ಟೋರಿʼ ಬ್ಯಾನ್‌ ಮಾಡಿಸಲು ಹೊರಟಿರುವ ಕಾಂಗ್ರೆಸ್‌ ಭಯೋತ್ಪಾದಕರ ಜೊತೆಗೆ ನಿಂತಿದೆ ಎಂದ ಪ್ರಧಾನಿ ಮೋದಿ!

masthmagaa.com:

ಕರ್ನಾಟಕ ಅಸೆಂಬ್ಲಿ ಎಲೆಕ್ಶನ್‌ ಹಿನ್ನೆಲೆಯಲ್ಲಿ ಭಾರೀ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ವಿವಾದಿತ ʻದಿ ಕೇರಳ ಸ್ಟೋರಿʼ ಸಿನಿಮಾವನ್ನ ಉಲ್ಲೇಖಿಸಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಇಂದು ನಡೆದ ಬಿಜೆಪಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ್ದ ಮೋದಿ, ʻದಿ ಕೇರಳ ಸ್ಟೋರಿʼ ಸಿನಿಮಾ ಕೇರಳದಲ್ಲಿ ನಡೆದಿರುವ ಕರಾಳ ಘಟನೆಗಳನ್ನ ಆಧರಿಸಿದೆ. ಆದರೆ ಕಾಂಗ್ರೆಸ್​ನವರು ಆ ಸಿನಿಮಾವನ್ನು ಬ್ಯಾನ್ ಮಾಡಲು ಒತ್ತಾಯಿಸುವ ಮೂಲಕ ಭಯೋತ್ಪಾದಕರ ಜೊತೆಗೆ ನಿಂತಿದ್ದಾರೆ ಅಂತ ಆರೋಪಿಸಿದ್ದಾರೆ. ಭಯೋತ್ಪಾದಕರ ಸಂಚು ಆಧರಿಸಿದ ‘ದಿ ಕೇರಳ ಸ್ಟೋರಿ’ ಚಿತ್ರದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಭಯೋತ್ಪಾದನೆಯ ಮೇಲೆ ನಿರ್ಮಿಸಲಾದ ಚಿತ್ರವನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಮತ್ತು ಭಯೋತ್ಪಾದಕರಿಗೆ ಸಪೋರ್ಟ್‌ ಮಾಡ್ತಿದೆ ಅಂತ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply