ತಮಿಳುನಾಡಿನಲ್ಲಿ ಪಿಎಂ ಮೋದಿ: ಖೇಲೋ ಇಂಡಿಯಾಗೆ ಚಾಲನೆ

masthmagaa.com:

ಪ್ರಧಾನಿ ಮೋದಿ ಶುಕ್ರವಾರ ತಮಿಳುನಾಡಿಗೆ ಭೇಟಿ ನೀಡಿ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ 2036ಕ್ಕೆ ಇಂಡಿಯಾದಲ್ಲಿ ಒಲಿಂಪಿಕ್ಸ್‌ ಆಯೋಜನೆ ಮಾಡೋಕೆ ಪ್ರಯತ್ನ ಪಡ್ತಿದ್ದೇವೆ ಅಂತೇಳಿದ್ದಾರೆ. ಇನ್ನು ಜನವರಿ 20,21ರಂದು ಪಿಎಂ ಮೋದಿ ತ್ರಿಚಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಅರುಲ್‌ಮಿಗು ರಂಗನಾಥಸ್ವಾಮಿ ದೇವಸ್ಥಾನ ಹಾಗೂ ದನುಷ್ಕೋಟಿಯ ಕೋದಂಡರಾಮಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಇನ್ನು ಗಣರಾಜ್ಯೋತ್ಸವಕ್ಕೆ ಮುಂಚೆ ಪಿಎಂ ಮೋದಿ ಹಾಗೂ ಫ್ರೆಂಚ್‌ ಅಧ್ಯಕ್ಷ ಎಮಾನುಯಲ್‌ ಮ್ಯಾಕ್ರಾನ್‌ ರಾಜಸ್ಥಾನದಲ್ಲಿ ರೋಡ್‌ಷೋ ನಡೆಸಲಿದ್ದಾರೆ ಎನ್ನಲಾಗ್ತಿದೆ. ರಿಪಬ್ಲಿಕ್‌ ಡೇ ಚೀಫ್‌ ಗೆಸ್ಟ್‌ ಆಗಿ ಬರ್ತಿರೋ ಮ್ಯಾಕ್ರಾನ್, ಜನವರಿ 25ಕ್ಕೆ ಬರ್ತಿದ್ದಂಗೆ ಜೈಪುರದಲ್ಲಿ ಮೋದಿ ಜೊತೆ ರೋಡ್‌ ಷೋನಲ್ಲಿ ಜೊತೆಯಾಗಲಿದ್ದಾರೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply