ಮೈಸೂರಿನಲ್ಲಿ ಪ್ರಧಾನಿ ಮೋದಿ ಸಮಾವೇಶ: ಮಾಜಿ ಪಿಎಂ HDD ಸಾಥ್‌

masthmagaa.com:

ಪಿಎಂ ಮೋದಿ ರಾಜ್ಯದಲ್ಲಿ ಎರಡನೇ ಸುತ್ತಿನ ಮತಯಾಚನೆ ಮಾಡೋಕೆ ರಾಜ್ಯಕ್ಕೆ ಬಂದಿದ್ದಾರೆ. ಸಿಎಂ ಸಿದ್ಧರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಸಾಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆನೂ ಮಾತನಾಡಿ, ದೇಶದ ಐಟಿ ಹಬ್‌ನಲ್ಲಿ ಕುಡಿಯೋ ನೀರಿನ ಸಮಸ್ಯೆ ಇದೆ ಅಂತ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಭಾರತ ಮಾತೆಗೆ ಜೈಕಾರ ಹಾಕೋಕೆ ಯಾರ ಪರ್ಮಿಶನ್‌ ಬೇಕು ಅಂತ ಕೇಳಿ, ಕಾಂಗ್ರೆಸ್‌ ಶಾಸಕ ಲಕ್ಷ್ಮಣ್‌ ಸವದಿ ನಡೆಯನ್ನ ಟೀಕಿಸಿದ್ದಾರೆ. ಇನ್ನು ವೇದಿಕೆಯಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಮೈಸೂರು ಲೋಕಸಭಾ ಅಭ್ಯರ್ಥಿ ಯದುವೀರ್‌, ಹಾಸನ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಹಾಗೂ ಇತರ ಬಿಜೆಪಿ, ಜೆಡಿಎಸ್‌ ನಾಯಕರು ಪಿಎಂ ಮೋದಿಯವ್ರಿಗೆ ಸಾಥ್‌ ಕೊಟ್ಟಿದ್ದಾರೆ. ಇನ್ನು ಮೋದಿ ಬರೋಕು ಮುಂಚೇನೆ ಸಿಎಂ ಸಿದ್ಧರಾಮಯ್ಯ ಮೋದಿಯವ್ರಿಗೆ ವೆಲ್‌ಕಮ್‌ ಮಾಡಿ ಪೋಸ್ಟ್‌ ಒಂದನ್ನ ಹಾಕಿದ್ರು. ಇದ್ರಲ್ಲಿ ಕನ್ನಡಿಗರು ನಿಮಗೆ ಒಂದು ಬಾರಿ 17 ಸೀಟ್‌ಗಳನ್ನ, ಇನ್ನೊಮ್ಮೆ 25 ಸೀಟ್‌ಗಳನ್ನ ಗೆಲ್ಲಿಸಿಕೊಟ್ಟಿದ್ರು. 15ನೇ ಹಣಕಾಸು ಆಯೋಗದ ವಿಶೇಷ ಅನುದಾನ, ಬರಪರಿಹಾರ, ರಾಜ್ಯದ ತೆರಿಗೆ ಪಾಲು, ಮಹಾದಾಯಿ, ಭದ್ರಾ ಮೇಲ್ದಂಡೆ ವಿಚಾರವಾಗಿ ಉತ್ತರ ಕೊಡಿ ಅಂತ ಹಲವು ಪ್ರಶ್ನೆ ಕೇಳಿದ್ದಾರೆ. ಇನ್ನೊಂದು ಕಡೆ ಪಿಎಂ ಮೋದಿಯವ್ರನ್ನ ಹಿಟ್ಲರ್‌, ಮುಸಲೋನಿಗೆ ಹೋಲಿಕೆ ಮಾಡಿದ್ದ ಆರೋಪದ ಮೇಲೆ ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ದೂರು ನೀಡಿದೆ. ಅವರನ್ನ ಸ್ಟಾರ್‌ ಪ್ರಚಾರಕ ಪಟ್ಟಿಯಿಂದ ಕೈಬಿಡಬೇಕು ಅಂತ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಇನ್ನು ಮೈಸೂರಿಗೆ ಬರೋಕೆ ಮುಂಚೆ ಮಧ್ಯಪ್ರದೇಶದ ಹೊಶಂಗಾಬಾದ್‌ನಲ್ಲಿ ಪ್ರಚಾರದ ವೇಳೆ ಪಿಎಂ ಮೋದಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನ ಟೀಕಿಸಿದ್ದಾರೆ. ಕಾಂಗ್ರೆಸ್‌ನ ರಾಜಕುಮಾರ ಒಂದೇ ಕ್ಷಣದಲ್ಲಿ ಭಾರತದ ಬಡತನ ನಿರ್ಮೂಲನೆ ಮಾಡ್ತಿನಿ ಅಂತ ಹೇಳಿದ್ದಾರೆ. ಇಡೀ ದೇಶ ಈ ರಾಜ ಮಾಂತ್ರಿಕ ಇಷ್ಟು ದಿನ ಎಲ್ಲಿ ಅಡಗಿದ್ದ ಅಂತ ಕೇಳ್ತಿದ್ದಾರೆʼ ಅಂತ ಮೋದಿ ರಾಹುಲ್‌ ಕಾಲೆಳೆದಿದ್ದಾರೆ.

-masthmagaa.com

Contact Us for Advertisement

Leave a Reply