ಮುಂದಿನ ವಾರ ಮೋದಿ ಸೇರಿದಂತೆ ಕ್ವಾಡ್ ನಾಯಕರ ಬೇಟಿಗೆ ವೇದಿಕೆ ಸಿದ್ಧ!

masthmagaa.com:

ಮುಂದಿನ ವಾರ ಪ್ರಧಾನಿ ಮೋದಿ ಸೇರಿದಂತೆ ಕ್ವಾಡ್​ ನಾಯಕರ ಸಭೆ ನಡೆಯಲಿದೆ. ಅದ್ರಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ಭಾಗಿಯಾಗಲಿದ್ದಾರೆ. ಈ ವೇಳೆ ಕೊರೋನಾ ಮತ್ತು ಲಸಿಕೆ ಕಾಯಕ್ರಮದ ಕುರಿತು ಪರಿಶೀಲಿಸ್ತಾರೆ, ಚರ್ಚಿಸ್ತಾರೆ. ಜೊತಗೆ ಸಂಪರ್ಕ, ಮೂಲಭೂತ ಸೌಕರ್ಯ, ಸೈಬರ್ ಸೆಕ್ಯೂರಿಟಿ, ಸಾಗರ ಭದ್ರತೆ ಬಗ್ಗೆ ಕೂಡ ಚರ್ಚೆ ನಡೆಯಲಿದೆ ಅಂತ ಸರ್ಕಾರಿ ಮೂಲಗಳು ತಿಳಿಸಿವೆ. ಇವೆಲ್ಲದ್ರ ನಡುವೆ ಪ್ರಮುಖವಾಗಿ ಅಫ್ಘಾನಿಸ್ತಾನದ ಕುರಿತು ಚರ್ಚೆ ನಡೆಯೋ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

-masthmagaa.com

Contact Us for Advertisement

Leave a Reply