ಪಾಕಿಸ್ತಾನ್:‌ ‌ಕಾರಣವಿಲ್ದೇ ಹಿಂದೂ ಯುವಕನನ್ನ ಎನ್‌ಕೌಂಟರ್ ಮಾಡಿದ ಪೊಲೀಸ್

masthmagaa.com:

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವ್ರ ಮೇಲಿನ ದೌರ್ಜನ್ಯ ಮುಂದುವರೆದಿದೆ.ಈ ವಾರದ ಆರಂಭದಲ್ಲಿ ಪಾಕಿಸ್ತಾನ್‌ ಪೊಲೀಸ್‌ ಅಧಿಕಾರಿಯೊಬ್ರು ಹಿಂದೂ ಯುವಕನನ್ನ ಯಾವುದೇ ಕಾರಣವಿಲ್ದೇ ಎನ್‌ಕೌಂಟರ್‌ ಮಾಡಿರೊ ವಿಷಯ ಇದೀಗ ತಿಳಿದು ಬಂದಿದೆ. ಅಲ್ದೇ ಪೊಲೀಸ್‌ ಅಧಿಕಾರಿ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಅಂದ್ಹಾಗೆ ಮೇ 1 ರಂದು ತನ್ನ ತಂಗಿಯ ಮದುವೆಗೆ ಹಣ ತಗೊಂಡು ಮನೆಗೆ ವಾಪಾಸ್‌ ಹೋಗ್ತಿರುವಾಗ, ಪೊಲೀಸರು ಕಮಲ್‌ ಕಿಶನ್‌ ಅನ್ನೊ ಹಿಂದೂ ಯುವಕನನ್ನ ಹಾಗೂ ಅನಿಲ್‌ ಅನ್ನೊ ಆತನ ಸ್ನೇಹಿತನನ್ನ ತಡೆದಿದ್ದಾರೆ. ಆಗ ಕಮಲ್‌ನಿಂದ 80 ಸಾವಿರ ಹಣ, ಆತನ ಮೊಬೈಲ್‌ ತಗೊಂಡಿದ್ದಾರೆ. ನಂತರ ಕಮಲ್‌ನನ್ನ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಶೂಟ್‌ ಮಾಡಿದ್ದಾರೆ. ಅಲ್ದೇ ಆತನ ಗೆಳೆಯ ಅನಿಲ್‌ ವಿರುದ್ಧ ಸುಳ್ಳು ಕೇಸ್‌ ಹಾಕಿದ್ದಾರೆ. ಬಳಿಕ ಕಮಲ್‌ ತಂದೆ ತಮ್ಮ ಮಗನ ಸಾವಿನ ಬಗ್ಗೆ ಕೇಸ್‌ ದಾಖಲಿಸಿದ್ದು, ಪೋಸ್ಟ್‌ ಮಾರ್ಟಮ್‌ ರಿಪೋರ್ಟ್‌ನಲ್ಲಿ ಪೊಲೀಸ್‌ ಶೂಟ್‌ ಮಾಡಿರೋ ವಿಷಯ ತಿಳಿದು ಬಂದಿದೆ. ಇದೀಗ ಪೊಲೀಸ್‌ ವಿರುದ್ಧ ಕೇಸ್‌ ದಾಖಲಾಗಿದೆ. ಇನ್ನು ಪಾಕಿಸ್ತಾನದಲ್ಲಿ ಅಧಿಕೃತ ಮಾಹಿತಿ ಪ್ರಕಾರ 75 ಲಕ್ಷಕ್ಕೂ ಅಧಿಕ ಹಿಂದೂಗಳು ವಾಸವಾಗಿದ್ದಾರೆ. ಅದ್ರಲ್ಲೂ ಹೆಚ್ಚಿನ ಹಿಂದೂಗಳು ಅಲ್ಲಿನ ಸಿಂಧ್‌ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ. ಇವರ ಮೇಲೆ ಆಗಾಗ ಹತ್ಯೆ, ಲೈಂಗಿಕ ದೌರ್ಜನ್ಯ, ಬೆದರಿಕೆಯಂಥ ಪ್ರಕರಣಗಳು ವರದಿಯಾಗ್ತಿರುತ್ತವೆ. ಅಂದ್ಹಾಗೆ ಕೆಳ ದಿನಗಳ ಹಿಂದೆಯಷ್ಟೇ 6 ವರ್ಷದ ಪುಟ್ಟ ಹಿಂದೂ ಬಾಲಕಿಯನ್ನ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿತ್ತು. ಇನ್ನೊಂದ್‌ ಕಡೆ ಪಾಕ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಶಾಲೆಯೊಂದರ 7 ಶಿಕ್ಷಕರು ಮೃತಪಟ್ಟಿದ್ದಾರೆ. ಅಫ್ಘಾನಿಸ್ತಾನದ ಗಡಿ ಭಾಗದಲ್ಲಿನ ಕುರ್ರಮ್‌ ಜಿಲ್ಲೆಯ ಪಾರಾಚಿನಾರ್‌ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಇದಕ್ಕೂ ಮೊದಲು ಅದೇ ಏರಿಯಾದಲ್ಲಿ ನಡೆದ ದಾಳಿಯಲ್ಲಿ ಓರ್ವ ಶಿಕ್ಷಕ ಮೃತಪಟ್ಟಿದ್ರು ಎನ್ನಲಾಗಿದೆ. ಇನ್ನು ಶಿಕ್ಷಕರನ್ನ ಟಾರ್ಗೆಟ್‌ ಮಾಡಿ ದಾಳಿ ನಡೆಸಲಾಗಿದ್ದು, ದಾಳಿಯ ಹಿಂದಿನ ಉದ್ದೇಶ ಇನ್ನು ತಿಳಿದು ಬಂದಿಲ್ಲ. ಆದ್ರೆ ಮೃತ ಶಿಕ್ಷಕರು ಶಿಯಾ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸೇರಿದವ್ರು ಅಂತ ಹೇಳಲಾಗಿದೆ. ಕುರ್ರಮ್‌ ಬುಡಕಟ್ಟು ಜಿಲ್ಲೆಯಗಿದ್ದು, ಶಿಯಾ ಮುಸ್ಲಿಂ ಜನಸಂಖ್ಯೆಯನ್ನ ಹೊಂದಿದೆ. ಇವರ ಮೇಲೆ ಸುನ್ನಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಉಗ್ರ ಗುಂಪುಗಳು ಆಗಾಗ ದಾಳಿ ಮಾಡ್ತಿರುತ್ತವೆ.

-masthmagaa.com

Contact Us for Advertisement

Leave a Reply