ಅಪ್ಪುಗೆ ಕನ್ನಡ ಕಿರೀಟ..ಪ್ರಶಸ್ತಿಯೇ ಪುನೀತ..! ಸಮಾರಂಭದಲ್ಲಿ ರಜನಿಕಾಂತ್‌ ಹೇಳಿದ್ದೇನು ಗೊತ್ತಾ?

masthmagaa.com:

ಚಂದನವನದ ʻವೀರ ಕನ್ನಡಿಗʼ ಅಭಿಮಾನಿಗಳ ಪಾಲಿನ ಅಪ್ಪು ದಿವಂಗತ ನಟ ಡಾ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಕರ್ನಾಟಕದ ಅತ್ಯುನ್ನತ ನಾಗರೀಕ ಗೌರವ ಕರ್ನಾಟಕ ರತ್ನ ಪ್ರದಾನ ಮಾಡಲಾಗಿದೆ. ವಿಧಾನಸೌಧನ ಮುಂಬಾಗ ನಡೆದ ಸಮಾರಂಭದಲ್ಲಿ ಪುನೀತ್‌ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಈ ಪ್ರಶಸ್ತಿಯನ್ನ ಹಸ್ತಾಂತರಿಸಲಾಗಿದೆ. ಈ ಮೂಲಕ ಕರ್ನಾಟಕ ರತ್ನ ಪಡೆದ ಹತ್ತನೇ ಸಾಧಕ ಅಂತ ಪುನೀತ್‌ ಕರೆಸಿಕೊಂಡಿದ್ದಾರೆ. ಸಿನಿಮಾ ಹಾಗೂ ಸಮಾಜ ಸೇವೆಯ ಕ್ಷೇತ್ರದಲ್ಲಿ ಪುನೀತ್‌ಗೆ ಈ ಪ್ರಶಸ್ತಿ ನೀಡಲಾಗಿದೆ. ಅಲ್ಲದೇ ತಂದೆಯ ಬಳಿಕ ಮಗನೂ ಈ ಪ್ರಶಸ್ತಿ ಪಡೆದು ನೂತನ ಇತಿಹಾಸ ನಿರ್ಮಿಸಿದ್ದಾರೆ. ಚಿತ್ರರಂಗದಲ್ಲಿ ಈ ಪ್ರಶಸ್ತಿ ಪಡೆದ ಎರಡನೇ ನಟ ಅಂತ ಕರೆಸಿಕೊಂಡಿದ್ದಾರೆ .‌ ಇನ್ನು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟ ರಜನಿಕಾಂತ್‌, ಹಾಗೂ ತೆಲುಗಿನ ಸ್ಟಾರ್‌ ನಟ ನಂದಮೂರಿ ತಾರಕ ರಾಮರಾವ್‌ ಅಥವಾ ಜೂನಿಯರ್‌ ಎನ್‌ಟಿಆರ್‌, ಇನ್ಪೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ, ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಅತ್ತೆ ಸುಧಾಮೂರ್ತಿ, ರಾಜ್‌ ಕುಟುಂಬಸ್ಥರು, ಕನ್ನಡ ಚಿತ್ರರಂಗದ ಹಲವು ಗಣ್ಯರು, ಅಪ್ಪುಅಭಿಮಾನಿಗಳು ಕೂಡ ಸಾಕ್ಷಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಅಪ್ಪುಗೆ ಕರ್ನಾಟಕ ರತ್ನ ಕೊಡ್ತಿರೋದು ನಮ್ಮ ಪುಣ್ಯ ಅಂತ ಹೇಳಿದ್ರು. ಇನ್ನು ಪ್ರಶಸ್ತಿ ಪ್ರಧಾನ ಸಮಾರಂಭವದ ವೇಳೆ ವರ್ಷಧಾರೆ ಕೂಡ ಬೀಳ್ತಾ ಇತ್ತು. ಹೀಗಾಗಿ ಕಾರ್ಯಕ್ರಮವನ್ನ ತುರ್ತಾಗಿ ಮುಗಿಸಬೇಕಾದ ಸಂಧರ್ಭ ಎದುರಾಗಿತ್ತು. ಇನ್ನು ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಮಾತನಾಡಿದ ಸೂಪರ್‌ ಸ್ಟಾರ್‌ ರಜನಿಕಾಂತ್‌, ಮಾರ್ಕಂಡೇಯ, ಪ್ರಹ್ಲಾದನಂತೆ ಅಪ್ಪು ದೇವರ ಮಗ ಅಂತೇಳಿ ರಾಜ್ಯೋತ್ಸವಕ್ಕೆ ಶುಭಕೋರಿದ್ದಾರೆ. ಇನ್ನು ಜೂನಿಯರ್‌ ಎನ್‌ಟಿಆರ್‌ ಮಾತನಾಡಿ ಅಪ್ಪು ಯುದ್ದಮಾಡದೇ ರಾಜ್ಯ ಗೆದ್ರು. ಎಲ್ಲರಿಗೂ ಅವರ ವ್ಯಕ್ತಿತ್ವ ಮಾದರಿಯಾದುದು ಅಂತ ಹೇಳಿದ್ರು. ಇನ್ನು ಇದಕ್ಕೂ ಮುಂಚೆ ಮಾತನಾಡಿದ್ದ ಸಿಎಂ ಬೊಮ್ಮಾಯಿ ಅಪ್ಪು ಒಂದು ಪ್ರೇರಣ ಶಕ್ತಿ. ಪಠ್ಯದಲ್ಲಿ ಪುನೀತ್‌ ಅವರನ್ನ ಸೇರಿಸೋ ಕುರಿತು ಹಂತಹಂತವಾಗಿ ನಿರ್ಧಾರ ಕೈಗೊಳ್ಳುತ್ತೇವೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply