ರೈತರ ಪ್ರತಿಭಟನೆ ಕಾವು ಜೋರು, ಮಂತ್ರಿಗಳ ಜೊತೆ ಮಾತುಕತೆ!

masthmagaa.com:

ಹರ್ಯಾಣ, ಪಂಜಾಬ್‌ ರೈತರು ಫೆಬ್ರವರಿ 13ಕ್ಕೆ ಅಂದ್ರೆ ಮಂಗಳವಾರ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈಗಾಗ್ಲೆ ದೆಹಲಿ, ಹರ್ಯಾಣ ಹಾಗೂ ಪಂಜಾಬ್‌ಗಳ ಬಾರ್ಡರ್‌ನಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಸುಮಾರು 11 ಅಂಶಗಳ ಬೇಡಿಕೆಗಳನ್ನ ಈಡೇರಿಸುವಂತೆ ರೈತರು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇದ್ರಲ್ಲಿ
– ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಅಂದ್ರೆ MSP ಫಿಕ್ಸ್‌ ಮಾಡೋದು, ಈ ಸಂಬಂಧ ಡಾ. ಸ್ವಾಮಿನಾಥನ್‌ ವರದಿ ಜಾರಿ ಮಾಡೋದು.
– ರೈತರು ಮತ್ತು ಕಾರ್ಮಿಕರ ಸಾಲ ಮನ್ನಾ, ಪಿಂಚಣಿ ಯೋಜನೆ ಜಾರಿ.
– 2013ರ ಭೂಸ್ವಾದೀನ ಕಾಯ್ದೆ ಮರುಜಾರಿ, ಸರ್ಕಾರದಿಂದ ಯೋಜನೆಗಳಿಗೆ ಒತ್ತವರಿ ಆಗಿರೋ ಜಮೀನುಗಳಿಗೆ 4 ಪಟ್ಟು ಪರಿಹಾರ.
– ಲಖೀಮ್‌ಪುರ್‌ಖೇರಿ ಕೇಸ್‌ನ ಸರಿಯಾದ ತನಿಖೆ, ಆರೋಪಿಗಳಿಗೆ ಸರಿಯಾದ ಶಿಕ್ಷೆ.
– ವಿಶ್ವ ವ್ಯಾಪಾರ ಸಂಸ್ಥೆ ಸದಸ್ಯತ್ವ ವಾಪಸ್‌, ಫ್ರೀ ಟ್ರೇಡ್‌ ಅಗ್ರೀಮೆಂಟ್‌ಗಳನ್ನ ರದ್ದು ಮಾಡ್ಬೇಕು.
– 2020ರ ವಿದ್ಯುತ್‌ ತಿದ್ದುಪಡಿ ಬಿಲ್‌ ರದ್ದತಿ.
– ನರೇಗಾದಲ್ಲಿ 200 ದಿನಗಳ ಕೆಲಸ, ದಿನಕ್ಕೆ 700 ರೂಪಾಯಿ ದಿನಗೂಲಿ.
– ನಕಲಿ ಬೀಜಗಳು, ಕ್ರಿಮಿನಾಶಕ, ಗೊಬ್ಬರ ತಯಾರಿಕ ಕಂಪನಿಗಳ ಮೇಲೆ ಕ್ರಮ.
– ಮೆಣಸಿನಕಾಯಿ, ಹರಿಶಿಣ, ಮುಂತಾದ ಬೆಳೆಗಳಿಗೆ ರಾಷ್ಟ್ರೀಯ ಸಮಿತಿ ರಚನೆ.
– ದೆಹಲಿ ಸಂಘರ್ಷದಲ್ಲಿ ಬಲಿಯಾದ ರೈತ ಕುಟುಂಬಗಳಿಗೆ ಪರಿಹಾರ, ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ ಸೇರಿ ಹಲವು ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ.

ಸೋಮವಾರ ಕೇಂದ್ರ ಸಚಿವರಾದ ಪೀಯುಷ್‌ ಗೋಯಲ್‌, ಅರ್ಜುನ್‌ ಮುಂಡಾ ಹಾಗೂ ನಿತ್ಯಾನಂತ ರೈ ರೈತರನ್ನ ಭೇಟಿ ಮಾಡಲಿದ್ದಾರೆ. ಮುಖ್ಯವಾಗಿ ಕಿಸಾನ್‌ ಮಜ್ದೂರ್‌ ಮೋರ್ಚಾ(KMM) ಹಾಗೂ ಸಂಯುಕ್ತ ಕಿಸಾನ್‌ ಮೋರ್ಚಾದ ಪ್ರತಿನಿಧಿಗಳ ಜೊತೆ ಚಂಡೀಗಢದಲ್ಲಿ ಮಾತುಕತೆ ನಡೆಸಿದ್ದಾರೆ. ಇತ್ತ ದೆಹಲಿಗೆ ಹೊರಟಿದ್ದ ಹುಬ್ಬಳ್ಳಿಯ ರೈತರನ್ನ ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ಈ ಕ್ರಮವನ್ನ ಸಿಎಂ ಸಿಧ್ದರಾಮಯ್ಯ ಖಂಡಿಸಿದ್ದಾರೆ. ʻಬಂಧಿಸಿ, ಬೆದರಿಸಿ ರೈತರ ಹೋರಾಟ ಹತ್ತೀಕೋಕಾಗಲ್ಲ. ಇಂತಹ ದಬ್ಬಾಳಿಕೆಗಳಿಂದ ಇನ್ನಷ್ಟು ರೈತರು ಬೀದಿಗಿಳೀಬೋದು. ಕೇಂದ್ರ ಸರ್ಕಾರಕ್ಕೆ ಶಾಂತಿ, ಸುವ್ಯವಸ್ಥೆ ಬಗ್ಗೆ ಕಾಳಜಿ ಇದ್ರೆ, ಕೂಡಲೆ ರೈತರ ಬೇಡಿಕೆ ಈಡೇರಿಸಿʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply