ಮೋದಿ ಸರ್ಕಾರ ರೈತರಿಗೆ ಶಾಪ! ಮಲ್ಲಿಕಾರ್ಜುನ ಖರ್ಗೆ ಕಿಡಿ!

masthmagaa.com:

ಒಂದು ದಿನದ ಭಾರತ್‌ ಬಂದ್‌ ನಂತ್ರ ಇದೀಗ ʻದೆಹಲಿ ಚಲೋʼ ರೈತರ ಪ್ರತಿಭಟನೆ 5ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರದ ವಿರುದ್ಧ ರೈತರ ಪ್ರತಿಭಟನೆ ಕಂಟಿನ್ಯೂ ಆಗಿದೆ. ತಮ್ಮ ಡಿಮ್ಯಾಂಡ್‌ಗಳನ್ನ ಪೂರೈಸುವಂತೆ ಒತ್ತಾಯಿಸ್ತಿದ್ದಾರೆ. ಸರ್ಕಾರ ನಮ್ಮ ಬೇಡಿಕೆಗಳನ್ನ ಈಡೇರಿಸಿಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುತ್ತೆ ಅಂತ ಸಂಯುಕ್ತ ಕಿಸಾನ್‌ ಮೋರ್ಚಾ (SKM) ಎಚ್ಚರಿಕೆ ನೀಡಿದೆ. ಇನ್ನು ಫೆಬ್ರುವರಿ 18 ರಂದು ಮತ್ತೊಮ್ಮೆ ರೈತರ ಮುಖಂಡರು ಮತ್ತು ಕೇಂದ್ರ ಸಚಿವರ ಮಧ್ಯೆ 4ನೇ ಹಂತದ ಮಾತುಕತೆ ನಡೆಯಲಿದೆ. ಈ ಮೀಟಿಂಗ್‌ನಲ್ಲಿ ಕೇಂದ್ರ ಸಚಿವರುಗಳಾದ ಅರ್ಜುನ್‌ ಮುಂಡಾ, ಪೀಯುಷ್‌ ಗೋಯಲ್‌ ಹಾಗೂ ನಿತ್ಯಾನಂದ ರೈ ರೈತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಂದ್ಹಾಗೆ ಈ ಹಿಂದೆ ಫೆಬ್ರುವರಿ 8, 12 ಮತ್ತು 15 ರಂದು ಇದೇ ರೀತಿ ಸರ್ಕಾರ ಮತ್ತು ರೈತರ ಮಧ್ಯೆ ಮಾತುಕತೆಯಾಗಿತ್ತು. ಆದ್ರೆ ಇದ್ರಿಂದ ಯಾವ್ದೇ ರೀತಿ ಪ್ರಯೋಜನವಾಗಿರ್ಲಿಲ್ಲ. ಇನ್ನು ಅತ್ತ ರೈತ ಪ್ರತಿಭಟನೆ ಪರವಾಗಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತಾಡಿದ್ದಾರೆ. ʻನಮ್ಮ ದೇಶದ ರೈತರಿಗೆ ಮೋದಿ ಸರ್ಕಾರ ಶಾಪವಾಗಿದೆ. ಮೋದಿಯವ್ರ ಸುಳ್ಳು ಗ್ಯಾರಂಟಿಗಳಿಂದ ಈ ಹಿಂದೆ 750 ರೈತರು ಪ್ರಾಣ ಕಳೆದ್ಕೊಂಡಿದ್ದಾರೆ. ಈಗ ಪ್ರತಿಭಟನೆಯಲ್ಲಿ ಓರ್ವ ರೈತ ಮೃತಪಟ್ಟಿದ್ದಾರೆ. ಜೊತೆಗೆ ರಬ್ಬರ್‌ ಬುಲೆಟ್‌ಗಳಿಂದಾಗಿ ಮೂವರು ರೈತರು ತಮ್ಮ ದೃಷ್ಟಿಯನ್ನೇ ಕಳೆದ್ಕೊಂಡಿದ್ದಾರೆ. ಮೋದಿ ಸರ್ಕಾರ ರೈತರನ್ನ ಶತ್ರುಗಳಂತೆ ಟ್ರೀಟ್‌ ಮಾಡ್ತಿದೆ. ಕೇವಲ ಕಾಂಗ್ರೆಸ್‌ ಮಾತ್ರ ರೈತರ MSP ಗೆ ಕಾನೂನು ಮಾನ್ಯತೆ ನೀಡೋಕೆ ಸಾಧ್ಯʼ ಅಂದಿದ್ದಾರೆ. ಇನ್ನು ಫೆಬ್ರುವರಿ 16 ರಂದು ನಡೆದ ಭಾರತ್‌ ಬಂದ್‌ ವೇಳೆ ಪಂಜಾಬ್‌ನ ಶಂಭು ಗಡಿಯಲ್ಲಿ ನಿಯೋಜಿಸಲಾದ ಹರಿಯಾಣದ ಪೊಲೀಸ್‌ ಸಬ್‌-ಇನ್ಸ್‌ಪೆಕ್ಟರ್‌ ಮೃತಪಟ್ಟಿದ್ದಾರೆ. ಇವ್ರನ್ನ ಹೀರಾ ಲಾಲ್‌ ಅಂತ ಗುರುತಿಸಲಾಗಿದ್ದು, ಇವ್ರು ಕರ್ತವ್ಯದಲ್ಲಿದ್ದಾಗ ಸಡನ್‌ ಆಗಿ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾರೆ. ಹೀಗಂತ ಅಲ್ಲಿನ ಪೊಲೀಸ್‌ ವಕ್ತಾರ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply