ರಷ್ಯಾದಿಂದ ಯುರೋಪ್‌ಗೆ ಹಾರೋ ಕನಸು ರಷ್ಯಾ ಸೇನೆಯಲ್ಲೇ ಕೊನೆ!

masthmagaa.com:

ಇನ್ನು ರಷ್ಯಾದಲ್ಲಿ ಸಿಕ್ಕಾಕೊಂಡಿರೋ ಪಂಜಾಬ್‌ ಮೂಲದ ಯುವಕರು ರಷ್ಯಾ ಮೂಲಕ ಯುರೋಪ್‌ಗೆ ಹೋಗೋ ಪ್ಲಾನ್‌ ಮಾಡಿದ್ರು ಅಂತ ತಿಳಿದುಬಂದಿದೆ. ರಷ್ಯಾ ಮೂಲಕ ಪೋಲೆಂಡ್‌, ಬೆಲರುಸ್‌ಗೆ ಹೋದ್ರೆ ಆ ದೇಶಗಳಲ್ಲಿ ಅಸೈಲಮ್‌ ಅಥವಾ ಆಶ್ರಯ ಪಡೆಯೋಕೆ ಅಪ್ಲೈ ಮಾಡ್ಬೋದು. ಇದೇ ಕಾರಣಕ್ಕೆ ಈ ಯುವಕರು ಟೂರಿಸ್ಟ್‌ ವೀಸಾ ಪಡೆದು ರಷ್ಯಾಗೆ ಹೋಗಿದ್ದಾರೆ. ಆದ್ರೆ ರಷ್ಯಾ ಮಿತ್ರರಾಷ್ಟ್ರ ಬೆಲರುಸ್‌ನಲ್ಲಿ ಇವರನ್ನ ಅರೆಸ್ಟ್‌ ಮಾಡಿ ರಷ್ಯಾಗೆ ಒಪ್ಪಿಸಲಾಗಿದೆ. ನಂತರ ಒತ್ತಾಯಪೂರ್ವಕವಾಗಿ ಇವ್ರನ್ನ ಯುಕ್ರೇನ್‌ ವಿರುದ್ಧ ಯುದ್ಧಕ್ಕೆ ಕಳಿಸಲಾಗಿದೆ.

-masthmagaa.com

Contact Us for Advertisement

Leave a Reply