ಗೂಡು ಬಿಟ್ಟು ಆಚೆ ಬಂದ ಪುಟಿನ್! ಅಪರೂಪಕ್ಕೆ ವಿದೇಶಿ ಪ್ರಯಾಣ!

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅಪರೂಪಕ್ಕೆ ದೇಶ ಬಿಟ್ಟು ಹೊರಗೆ ಬಂದಿದ್ದಾರೆ. ಸೇನಾ ವಿಮಾನದಲ್ಲಿ ಎಡಕ್ಕೆ ಬಲಕ್ಕೆ ಎರಡೆರಡು Su-35 ಫೈಟರ್‌ ಜೆಟ್‌ಗಳ ಎಸ್ಕಾರ್ಟ್‌ ಹಾಕೊಂಡು ಬುಧವಾರ ಸೌದಿ ಅರೇಬಿಯಾಗೆ ಬಂದಿಳಿದಿದ್ದಾರೆ. ಯುಕ್ರೇನ್‌ ಯುದ್ಧದಿಂದ ಎಲ್ಲಿ ಅಮೆರಿಕ, ಯುರೋಪ್‌ಗಳು ಸೇರ್ಕೊಂಡು ರಷ್ಯಾನ ಮೂಲೆಗುಂಪು ಮಾಡ್ತಿರೊ ಹೊತ್ತಲ್ಲಿ, ಗಲ್ಫ್‌ ರಾಷ್ಟ್ರಗಳ ಜೊತೆ ಸಂಬಂಧಗಳನ್ನ ಗಟ್ಟಿಗೊಳಿಸೊ ಪ್ರಯತ್ನದಲ್ಲಿ ಪುಟಿನ್‌ ಮಿಡ್ಲ್‌ ಈಸ್ಟ್‌ಗೆ ಭೇಟಿ ಕೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ. ಇನ್ನು ಸೌದಿ ಪ್ರಿನ್ಸ್‌ ಮೊಹಮದ್‌ ಬಿನ್‌ ಸಲ್ಮಾನ್‌ ಪುಟಿನ್‌ರನ್ನ ಸ್ವಾಗತ ಮಾಡ್ಕೊಂಡಿದ್ದಾರೆ. ಈ ವೇಳೆ ಪುಟಿನ್ ʻರಾಜಕೀಯವಾಗಿ ಹಾಗೂ ಆರ್ಥಿಕವಾಗಿ ನಮ್ಮ ಹಾಗೂ ಸೌದಿ ಸಂಬಂಧ ಬಹಳ ಚೆನ್ನಾಗಿದೆ. ಈ ಪ್ರದೇಶದ ಆಗು-ಹೋಗುಗಳ ಬಗ್ಗೆ ಮಾಹಿತಿಗಳನ್ನ ಶೇರ್‌ ಮಾಡಿ ಅವುಗಳ ಮೌಲ್ಯಮಾಪನ ಮಾಡೋದು ಎರಡೂ ದೇಶಗಳಿಗೆ ಬಹಳ ಮುಖ್ಯʼ ಅಂದಿದ್ದಾರೆ. ನವೆಂಬರ್‌ನಲ್ಲಿ ತೈಲ ರಾಷ್ಟ್ರಗಳ OPEC ಸಮ್ಮೇಳನ ನಡೆದಿತ್ತು. ಇದ್ರ ಬೆನ್ನಲ್ಲೇ ರಿಯಾದ್‌ಗೆ ಬಂದಿರೋ ಪುಟಿನ್‌ ತೈಲ ಹಾಗೂ ಇತರ ಸಹಕಾರ ಒಪ್ಪಂದಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಅಂತ ತಿಳಿದು ಬಂದಿದೆ. ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ಹೇರಿರ್ಬೋದು, ಇಂಟರ್‌ಪೋಲ್‌ ವಾರೆಂಟ್‌ ಇಶ್ಯೂ ಮಾಡಿರ್ಬೋದು. ಆದ್ರೂ ನಮಗೆ ಆತಿಥ್ಯ ನೀಡೋ ದೇಶಗಳು ಇನ್ನೂ ಈ ಭೂಮಿ ಮೇಲಿವೆ ಅಂತ ಈ ಭೇಟಿ ಮೂಲಕ ಪುಟಿನ್‌ ಮೆಸೇಜ್‌ ಕೊಟ್ಟಿದ್ದಾರೆ ಅಂತ ಕೆಲವರು ವಿಶ್ಲೇಷಿಸ್ತಿದಾರೆ.

-masthmagaa.com

Contact Us for Advertisement

Leave a Reply