ರಾಮೇಶ್ವರಂ ಕೆಫೆ ಬದಲು ಐಟಿ ಕಂಪನಿ ಮೇಲೆ ಕಣ್ಣಿಟ್ಟಿದ್ರು ಉಗ್ರರು!

masthmagaa.com:

ಬೆಂಗಳೂರಿನ ರಾಮೇಶ್ವರಂ ಕೆಫೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನವಾಗಿದ್ದು, ಇದೀಗ ಇವ್ರ ವಿಚಾರಣೆ ನಡೆಸಿರೋ NIA ಅಧಿಕಾರಿಗಳಿಗೆ ಶಾಕಿಂಗ್‌ ಮಾಹಿತಿ ಸಿಕ್ಕಿದೆ. ಅದೇನಂದ್ರೆ, ರಾಮೇಶ್ವರಂ ಕೆಫೆಗೂ ಮೊದಲು ಈ ಉಗ್ರರು ಟಾರ್ಗೆಟ್‌ ಮಾಡಿರೋದು ವೈಟ್‌ಫೀಲ್ಡ್‌ನಲ್ಲಿರೋ ಐಟಿ ಕಂಪನಿಗಳು. ಎಸ್‌… ರಾಮೇಶ್ವರಂ ಕೆಫೆಯೊಳಗೆ ಸ್ಫೋಟಕ ಯಾಕಿಟ್ರಿ ಅಂತ ವಿಚಾರಿಸಿದಾಗ ಉಗ್ರರು ಈ ರೀತಿ ಉತ್ತರಿಸಿದ್ದಾರೆ. ಬೆಂಗಳೂರಿನಲ್ಲಿ ಸ್ಪೆಷಲ್‌ ಎಕನಾಮಿಕ್‌ ಜೋನ್‌ ಅಂದ್ರೆ ವೈಟ್‌ ಫೀಲ್ಡ್‌. ಇಲ್ಲಿ ದೊಡ್ಡ ದೊಡ್ಡ ಐಟಿಬಿಟಿ ಕಂಪನಿಗಳಿವೆ. ಸಾವಿರಾರು ಜನರು ಕೆಲಸ ಮಾಡ್ತಾರೆ. ಸೋ ಇಲ್ಲಿ ಸ್ಪೋಟ ಮಾಡಿದ್ರೆ… ದೊಡ್ಡ ಮಟ್ಟದಲ್ಲಿ ನ್ಯೂಸ್‌ ಆಗುತ್ತೆ ಅಂತ ಬಂಧಿತ ಅಬ್ದುಲ್‌ ಮತೀನ್‌ ತಾಹಾ ಹಾಗೂ ಮುಸಾವೀರ್‌ ಹುಸೇನ್‌ ಉಗ್ರರು ಪ್ಲಾನ್‌ ಮಾಡಿದ್ರು. ಆದ್ರೆ ಐಟಿಬಿಟಿ ಕಂಪನಿಗಳಿರೋ ಏರಿಯಾದಲ್ಲಿ ಸ್ಪೋಟಕ ಇಡೋದಂದ್ರೆ ಸುಲಭದ ಮಾತಲ್ಲ. ಹೈ ಸೆಕ್ಯುರಿಟಿ, ಸಿಸಿಟಿವಿಯ ಮೂರನೇ ಕಣ್ಣು, ಮೆಟಲ್‌ ಡಿಟೆಕ್ಟರ್‌ಗಳಂತಹ ಸಾಕಷ್ಟು ಸವಾಲುಗಳು ಎದುರಾಗ್ತವೆ. ಆದ್ರಿಂದ ಇಂತಹ ಕಂಪನಿಗಳಲ್ಲಿ ಸ್ಪೋಟಕ ಇಡೋದು ಬಿಡಿ… ಒಳಗೆ ಹೋಗೋಕು ಕಷ್ಟ ಅಂತ ತಮ್ಮ ಪ್ಲಾನ್‌ ಬದಲಾಯಿಸಿದ್ದಾರೆ. ಆದ್ರೆ ಈ ಭಾಗದಲ್ಲಿ ಬೇರೆಲ್ಲಾದ್ರು ಸ್ಪೋಟ ಮಾಡ್ಬೇಕು ಅಂದುಕೊಂಡ ಉಗ್ರರ ಕಣ್ಣಿಗೆ ಬಿದ್ದಿದ್ದೇ…. ಜನರಿಂದ ತುಂಬಿ ತುಳುಕಾಡ್ತಿರೋ ʻರಾಮೇಶ್ವರಂ ಕೆಫೆʼ. ಇಲ್ಲಿ ಹೆಚ್ಚಿನ ಜನ ಸೇರ್ತಾರೆ, ಟೆಕ್ಕಿಗಳು ಕೂಡ ಬರ್ತಾರೆ… ಪ್ರಮುಖವಾಗಿ ಕೆಫೆ ಒಳಗೆ ಹೋಗೋದನ್ನ ತಡೆಯೋಕೆ ಮೆಟಲ್‌ ಡಿಟೆಕ್ಟರ್‌ ಆಗ್ಲಿ ಸೆಕ್ಯುರಿಟಿ ಆಗ್ಲಿ ಇಲ್ಲ. ಅಷ್ಟೇ ಅಲ್ದೇ ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಕೆಫೆ ಮುಂದೆ ಸಂಭ್ರಮಾಚರಣೆ ಕೂಡ ನಡೆದಿತ್ತು. ಸೋ ಉಗ್ರರು ತಮ್ಮ ಪ್ಲಾನ್‌ಗೆ ಸರಾಗವಾದ ಹಾದಿ ಸಿಕ್ಕಂತಾಯ್ತು ಅಂತ ರಾಮೇಶ್ವರಂ ಕೆಫೆಯನ್ನ ಟಾರ್ಗೆಟ್‌ ಮಾಡಿ ಮಾರ್ಚ್‌ 1ರಂದು ಸ್ಪೋಟಕ ಇಟ್ಟಿದ್ರು. ಹೀಗಂತ ಉಗ್ರರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

-masthmagaa.com

Contact Us for Advertisement

Leave a Reply