ಬೆಂಗಳೂರು ಕೆಫೆ ಸ್ಫೋಟ: NIA ತಂಡದಿಂದ ಚೆನೈನಲ್ಲಿ ತನಿಖೆ!

masthmagaa.com:

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತನ ಬೆನ್ಹತ್ತಿರೋ NIA ತಂಡ ಇದೀಗ ಚೆನೈನಲ್ಲಿರೋ ಮಾಲ್‌ ಒಂದನ್ನ ತಲುಪಿದ್ದಾರೆ. ಈ ಮಾಲ್‌ಗೆ NIA ತಂಡ ಹೋಗಿರೋದು ಶಾಪಿಂಗ್‌ ಮಾಡೋಕೆ ಅಲ್ಲ…. ಬದಲಿಗೆ ಬೇಸ್‌ಬಾಲ್‌ ಕ್ಯಾಪ್‌ ಧರಿಸಿರೋ ಶಂಕಿತನ ಸುಳಿವು ಚೆನೈ ಮಾಲ್‌ನಲ್ಲಿ ಸಿಕ್ಕಿದೆ. ಕೆಫೆ ಸ್ಫೋಟದಲ್ಲಿ, ಬೇಸ್‌ಬಾಲ್‌ ಕ್ಯಾಪ್‌ ಧರಿಸಿದ್ದ ಶಂಕಿತ…ಕೆಫೆಯಿಂದ ಹೊರಬಂದ ಮೇಲೆ ಒಂದ್ಕಡೆ ಬ್ರೇಕ್‌ ತಗೊಂಡು ತನ್ನ ಬಟ್ಟೆ ಬದಲಾಯಿಸಿ ಆ ಕ್ಯಾಪ್‌ನ್ನ ಅಲ್ಲೇ ಬಿಟ್ಟು ಹೋಗಿದ್ದ. NIA ಅಧಿಕಾರಿಗಳ ಕೈ ಸೇರಿರೋ ಈ ಬೇಸ್‌ಬಾಲ್‌ ಕ್ಯಾಪ್‌ನ್ನ ಚೆನೈನ ಮಾಲ್‌ ಒಂದ್ರಲ್ಲಿ ಖರೀದಿ ಮಾಡಲಾಗಿದೆ ಅಂತ ತಿಳಿದುಬಂದಿದೆ. ಈ ಸುಳಿವು ಹಿಡಿದು ಚೆನೈ ಮಾಲ್‌ ತಲುಪಿದ NIA ತಂಡಕ್ಕೆ…ಮತ್ತೊಂದು CCTV ಫುಟೇಜ್‌ ಲಭ್ಯವಾಗಿದೆ. ಇದ್ರಲ್ಲಿ ಇಬ್ಬರು ವ್ಯಕ್ತಿಗಳು ಮಾಲ್‌ ಒಳಗಿನ ಬ್ರ್ಯಾಂಡೆಡ್‌ ಸ್ಟೋರ್‌ ಒಂದ್ರಲ್ಲಿ ಬೇಸ್‌ಬಾಲ್‌ ಕ್ಯಾಪ್‌ ಖರೀದಿಸ್ತಿರೋದು ಸೆರೆಯಾಗಿದೆ. ಇವ್ರಿಬ್ಬರ ಪೈಕಿ..ಒಬ್ಬ ಸ್ಫೋಟದ ಶಂಕಿತ ಅಂತ NIA ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply