ಶುಭಮನ್‌ ಗಿಲ್ ಹೊಸ ಕ್ರಶ್‌ ರಶ್ಮಿಕಾ ಮಂದಣ್ಣ?!

masthmagaa.com:

ಇಂಡಿಯನ್‌ ಓಪನರ್ ಶುಭಮನ್ ಗಿಲ್ ಅವರ ಕ್ರಶ್‌ ರಶ್ಮಿಕಾ ಮಂದಣ್ಣಾ ಅಂತಾ ತುಂಬಾ ರೂಮರ್ ಕ್ರಿಯೇಟ್ ಆಗಿತ್ತು. ಬಹಳ ದಿನಗಳಿಂದ ಫ್ಯಾನ್ಸ್ ಈ ವಿಷಯವಾಗಿ ತುಂಬಾ ಮಾತನಾಡುತ್ತಿದ್ದರು. ಮಿಡಿಯಾ ಸಂದರ್ಶನವೊಂದರಲ್ಲಿ ತಾವೇ, ರಶ್ಮಿಕಾ ಮಂದಣ್ಣ ತಮ್ಮ ಕ್ರಶ್‌ ಅಂತ ಗಿಲ್ ಹೇಳಿಕೊಂಡಿದ್ದಾರೆ ಅಂತ ಚರ್ಚೆ ಆಗ್ತಿತ್ತು. ಇನ್‌ಸ್ಟಂಟ್‌ ಬಾಲಿವುಡ್‌ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ ನಲ್ಲಿ, ಪುಷ್ಪ ಸಿನಿಮಾ ನಟಿ ಮತ್ತು ಶುಭಮನ್‌ ಗಿಲ್, ಇಬ್ಬರದು ಪೋಟೋ ಒಟ್ಟಿಗೆ ಹಾಕಿ, “ಕ್ರಶ್‌ ಅಪ್-ಡೇಟ್: ರಶ್ಮಿಕಾ ಮಂದಣ್ಣ” ಅಂತ ಬರೆಯಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ 23 ವರ್ಷದ ಇಂಡಿಯನ್‌ ಕ್ರಿಕೆಟರ್ ಗಿಲ್, ಇದು ಯಾವ ಮೀಡಿಯಾ ಸಂದರ್ಶನ ಅಂತ ನಂಗೆ ಗೊತ್ತಿಲ್ಲ ಅಂದಿದ್ದಾರೆ. ಸೋ, ಶುಭಮನ್‌ ಗಿಲ್ ಅವರ ಪ್ರತಿಕ್ರಿಯೆ ನೋಡಿದರೆ, ಇದು ಸುಳ್ಳು ಸುದ್ದಿ ಅಂತ ಸ್ಪಷ್ಟವಾಗುತ್ತದೆ. ನಟಿ ರಶ್ಮಿಕಾ ಕೂಡ ಇದಕ್ಕೆ ಯವುದೇ ಪ್ರತಿಕ್ರಿಯೆ ನೀಡಿಲ್ಲ. ಆದ್ರೆ ಗಿಲ್ ಅಭಿಮಾನಿಗಳು ಮಾತ್ರ ಡಿಫ್ರೆಂಟ್ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ‘ಅರೇ ಭಾಯ್…‌ ಜನ ಏನೆನೋ ಹೇಳುತ್ತಾರೆ, ಅದನ್ನೆಲ್ಲಾ ಸುಮ್ಮನೆ ನಿರ್ಲಕ್ಷಿಸಿ’ ಅಂದಿದ್ದಾರೆ. ಇನ್ನೊಬ್ಬ ಅಭಿಮಾನಿ ಅಂತೂ, ‘ನೀವು ಅವರನ್ನ ಇಷ್ಟಪಡುತ್ತಿರಾ ಅಂತಾ ನಾವು ನಿರೀಕ್ಷೆ ಮಾಡಲ್ಲ’ ಅಂತ ರಷ್ಮಿಕಾಗೆ ಕಾಲೆಳಿದಿದ್ದಾರೆ.

-masthmagaa.com

Contact Us for Advertisement

Leave a Reply