ಖಾಸಗಿ ಮಾರ್ಕೆಟ್​ನಲ್ಲಿ ‘ಕೋವಿಶೀಲ್ಡ್’ ಲಸಿಕೆ ರೇಟ್​ ಎಷ್ಟು ಗೊತ್ತಾ?

masthmagaa.com:

ದೇಶದಲ್ಲಿ ಇಂದಿನಿಂದ ಕೊರೋನಾ ಲಸಿಕೆಯ ಪೂರೈಕೆ ಶುರುವಾಗಿರುವ ಬೆನ್ನಲ್ಲೇ ಮಾತನಾಡಿರುವ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದ ಸಿಇಒ ಮತ್ತು ಮಾಲೀಕ ಅಡಾರ್ ಪೂನಾವಾಲಾ, ‘ನಮ್ಮ ಫ್ಯಾಕ್ಟರಿಗಳಿಂದ ಇವತ್ತು ಲಸಿಕೆ ಪೂರೈಕೆಯಾಗಿರೋದು ಐತಿಹಾಸಿಕ ಕ್ಷಣ. ಲಸಿಕೆಯನ್ನ ದೇಶದ ಎಲ್ಲರಿಗೂ ತಲುಪಿಸೋದೇ ನಮ್ಮ ಮುಂದಿರುವ ಪ್ರಮುಖ ಚಾಲೆಂಜ್. ಭಾರತ ಸರ್ಕಾರಕ್ಕೆ ಮೊದಲ 10 ಕೋಟಿ ಡೋಸ್​ಗಳನ್ನ 200 ರೂಪಾಯಿಗೆ ಕೊಟ್ಟಿದ್ದೇವೆ. ಇದು ಸ್ಪೆಷಲ್ ಪ್ರೈಸ್. ಖಾಸಗಿ ಮಾರುಕಟ್ಟೆಗೆ ಒಂದು ಡೋಸ್​ಗೆ 1,000 ರೂಪಾಯಿ ಫಿಕ್ಸ್ ಮಾಡಿದ್ದೇವೆ. ನಮ್ಮ ಕಂಪನಿ ಮತ್ತು ಪ್ರಧಾನ ಮಂತ್ರಿ ಕಚೇರಿಗೆ ಹಲವು ದೇಶಗಳು ಪತ್ರ ಬರೆದಿವೆ. ಲಸಿಕೆಯನ್ನ ಕಳಿಸಿಕೊಡಿ ಅಂತ ಮನವಿ ಮಾಡುತ್ತಿವೆ. ಎಲ್ಲರನ್ನ ಸಂತೋಷಪಡಿಸುವ ಪ್ರಯತ್ನದಲ್ಲಿದ್ದೇವೆ. ಅಟ್​ ದಿ ಸೇಮ್ ಟೈಂ ನಮ್ಮ ದೇಶದ ಬಗ್ಗೆಯೂ ಯೋಚಿಸಬೇಕಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಆಫ್ರಿಕಾ ದೇಶಗಳಿಗೆ ಲಸಿಕೆ ಪೂರೈಸಲು ಪ್ರಯತ್ನಿಸುತ್ತಿದ್ದೇವೆ’ ಅಂತ ಅಡಾರ್ ಪೂನಾವಾಲಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply