ಸಿಂಗಾಪುರ: ಮುಸ್ಲಿಂರಿಗೆ ಲ್ಯಾಬ್‌ನಲ್ಲಿ ತಯಾರಿಸಲಾದ ಮಾಂಸ ಸೇವಿಸಲು ಅಸ್ತು!

masthmagaa.com:

ಲ್ಯಾಬ್‌ನಲ್ಲಿ ತಯಾರಿಸಲಾದ ಮಾಂಸ ಸೇವನೆಗೆ ಇದೀಗ ಸಿಂಗಾಪುರದಲ್ಲಿರೋ ಮುಸ್ಲಿಂರಿಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಹೌದು, ಈ ಲ್ಯಾಬ್‌ನಲ್ಲಿ ತಯಾರಿಸಲಾದ ಮಾಂಸ ಹಲಾಲ್‌ ಪ್ರಾಣಿಯ ಸೆಲ್‌ ಅಥ್ವಾ ಜೀವಕೋಶದಿಂದ ಮಾಡಿದ್ದಾಗಿದ್ರೆ ಸೇವಿಸ್ಬೋದು. ಹೀಗಂತ ಸಿಂಗಾಪುರದ ಮುಫ್ತಿ ನಜೀರುದ್ದೀನ್‌ ಮೊಹಮ್ಮದ್‌ ನಾಸಿರ್‌ ಹೇಳಿಕೆ ನೀಡಿದ್ದಾರೆ. ಈ ಮೂಲಕ ಲ್ಯಾಬ್‌ ಮಾಂಸ ಸೇವನೆಗೆ ಮುಂದಾಗಿರೋ ಜಗತ್ತಿನ ಮೊದಲ ದೇಶ ಸಿಂಗಾಪುರವಾಗಿದೆ. ಅಲ್ದೇ ಅದು ಕೂಡ ಹಲಾಲ್‌ ಲ್ಯಾಬ್‌ ಮಾಂಸ. ಇನ್ನು ಇಡೀ ಜಗತ್ತಿನಲ್ಲಿ ಲ್ಯಾಬ್‌ನಲ್ಲಿ ತಯಾರಿಸಲಾದ ಮಾಂಸವನ್ನ ಕೇವಲ ಸಿಂಗಾಪುರದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತೆ. ಈ ಮಾರಾಟ ಇತ್ತೀಚೆಗೆ ಸ್ಟಾರ್ಟ್‌ ಆಗಿದೆ. ಈ ಲ್ಯಾಬ್‌ ಮಾಂಸ ಅಂದ್ರೆ ಇದನ್ನ ಪ್ರಾಣಿಗಳ ಜೀವಕೋಶವನ್ನ ಬಳಸಿ, ಬೈಯೋರಿಯಾಕ್ಟರ್‌ನಲ್ಲಿ ತಯಾರಿಸಲಾಗುತ್ತೆ. ಇದು ಥೇಟ್‌ ಮಾಂಸದಂತೇ ಇರುತ್ತೆ. ಈ ಜೀವಕೋಶಗಳಿಗೆ ಅಮೈನೋ ಆ್ಯಸಿಡ್‌ಗಳಂತಹ ಪೋಷಕಾಂಶಗಳನ್ನ ನೀಡಿ ಬೆಳಸಲಾಗುತ್ತೆ. ನಂತ್ರ ಈ ಸೆಲ್‌ಗಳು ದಷ್ಟಪುಷ್ಟವಾದ ಮಾಂಸವಾಗಿ ಬೆಳೆದು, ನೋಡೋದಕ್ಕೂ ಹಾಗೂ ಟೇಸ್ಟ್‌ನಲ್ಲೂ ಥೇಟ್‌ ಪ್ರಾಣಿ ಮಾಂಸದಂತೇ ಇರುತ್ತೆ. ಆದ್ರೆ ಈ ಪ್ರಾಸೆಸ್‌ನ ಇನ್ನೊಂದು ಬೆನಿಫಿಟ್‌ ಅಂದ್ರೆ, ಇದಕ್ಕೆ ಪ್ರಾಣಿಗಳ ಬಲಿ ನೀಡ್ಬೇಕಿಲ್ಲ. ಜೀವಂತವಾಗಿರೋ ಪ್ರಾಣಿಗಳ ಸೆಲ್‌ ಅಥ್ವಾ ಜೀವಕೋಶ ಸಿಕಿದ್ರೆ ಸಾಕು, ಮುಂದಿನ ಕೆಲಸ ಲ್ಯಾಬ್‌ ಮಾಡುತ್ತೆ. ಸೋ ಪ್ರಾಣಿಗಳ ಹಿಂಸೆ ಸರಿಯಲ್ಲ ಅನ್ನೋ ವೆಜಿಟೇರಿಯನ್ಸ್‌ ಈ ಮಾಂಸ ಸೇವನೆ ಮಾಡ್ಬೋದು ಅನ್ಸುತ್ತೆ.

-masthmagaa.com

Contact Us for Advertisement

Leave a Reply