10 ವರ್ಷದ ನಂತ್ರ ರಾಜ್ಯದಿಂದ ಕಬ್ಬಿಣ ಅದಿರಿನ ರಫ್ತಿಗೆ ಗ್ರೀನ್‌ ಸಿಗ್ನಲ್‌ ನೀಡಿದ ಸುಪ್ರೀಕೋರ್ಟ್‌!

masthmagaa.com:

ರಾಜ್ಯದ ಮೂರು ಜಿಲ್ಲೆಗಳ ಕಬ್ಬಿಣ ಅದಿರು ರಫ್ತಿಗೆ ಸುಪ್ರೀಂ ಕೋರ್ಟ್‌ ಸುಮಾರು 10 ವರ್ಷಗಳ ಬಳಿಕ ಅನುಮತಿ ನೀಡಿದೆ. ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗಣಿಗಳಿಂದ ಅಗೆದ ಕಬ್ಬಿಣದ ಅದಿರನ್ನ ರಫ್ತು ಮಾಡೋಕೆ ಆಯಾ ಗಣಿಗಾರಿಕಾ ಸಂಸ್ಥೆಗಳಿಗೆ ಕೋರ್ಟ್‌ ಇವತ್ತು ಅನುಮತಿ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಒಳಗೊಂಡ ತ್ರಿಸದಸ್ಯ ಪೀಠ ಕಬ್ಬಿಣ ಅದಿರಿನ ಮೇಲಿನ ರಫ್ತು ನಿರ್ಬಂಧವನ್ನ ತೆಗ್ದುಹಾಕಿದೆ.
ಜೊತೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಉತ್ಖನನ ಮಾಡಿದ ಅದಿರನ್ನ ಎಕ್ಸಪೋರ್ಟ್‌ ಮಾಡೋಕೆ ಕೋರ್ಟ್‌ ಆದೇಶಿಸಿದೆ. ಅಂದ್ಹಾಗೆ ಪರಿಸರದ ನಾಶವನ್ನ ತಡೆಯುವ ಉದ್ದೇಶದಿಂದ ಕಬ್ಬಿಣ ಅದಿರನ್ನ ರಾಜ್ಯದಿಂದ ರಫ್ತು ಮಾಡೋದನ್ನ ಸುಪ್ರೀಂ ಕೋರ್ಟ್‌ 2012ರಲ್ಲಿ ನಿಷೇಧಿಸಿತ್ತು. ಇನ್ನ ಇದೇ ಟೈಮಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ರೆಡ್ಡಿ ಬ್ರದರ್ಸ್‌ ವಿರುದ್ದ ಅಕ್ರಮ ಗಣಿಗಾರಿಕೆ ಆರೋಪ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply