ಬೆಂಗಳೂರು ʻರಾಮೇಶ್ವರಂʼ ಸ್ಫೋಟ! ತನಿಖೆಗೆ 8 ತಂಡಗಳ ರಚನೆ!

masthmagaa.com:

ಬೆಂಗಳೂರಿನ ಸ್ಪೋಟ ಪ್ರಕರಣ ಕ್ಷಣಕ್ಷಣಕ್ಕೂ ಗಂಭೀರ ಸ್ವರೂಪ ಪಡೆಯುತ್ತಾ ಇದ್ದು ಈಗ ತನಿಖೆ ನಡೆಸಲು ಪ್ರತ್ಯೇಕವಾಗಿ 8 ತಂಡವನ್ನ ರಚಿಸಲಾಗಿದೆ. ಪ್ರಕರಣ ಸಂಬಂಧ ಬೆಂಗಳೂರಿನ CCB ಅಧಿಕಾರಿಗಳು 4 ಶಂಕಿತರನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸ್ತಿದ್ದಾರೆ. ಆದರೆ ಪೊಲೀಸ್‌ ಮೂಲಗಳ ಪ್ರಕಾರ…ವಶಕ್ಕೆ ಪಡ್ಕೊಂಡವರ್ಯಾರೂ ಆರೋಪಿಗಳಲ್ಲ. ಆದರೆ ಸ್ಫೋಟಕ ಇಟ್ಟ ವ್ಯಕ್ತಿಗೆ ಇವ್ರೇನಾದ್ರೂ ಹೆಲ್ಪ್‌ ಮಾಡಿರ್ಬೋದಾ ಅನ್ನೋ ಶಂಕೆ ಮೇಲೆ ವಿಚಾರಣೆ ನಡೆಸಲಾಗ್ತಿದೆ. ಇನ್ನು ಶಂಕಿತನ ಫೋನ್‌ ನಂಬರ್‌ ಪತ್ತೆ ಹಚ್ಚೋಕೂ ಪೊಲೀಸರು ಪ್ರಯತ್ನ ಪಡ್ತಿದ್ದಾರೆ. ರಾಮೇಶ್ವರಂ ಕೆಫೆ ಏರಿಯಾದಲ್ಲಿ ಸ್ಫೋಟ ಆಗೋ ಸಂದರ್ಭದಲ್ಲಿ ಸುಮಾರು 500 ಫೋನ್‌ ನಂಬರ್‌ಗಳು ಆಕ್ಟಿವ್‌ ಇದ್ವು ಅಂತ ಹೇಳಲಾಗ್ತಿದೆ. ಇನ್ನು ಸ್ಪೋಟವಿಟ್ಟ ಶಂಕಿತ ವ್ಯಕ್ತಿ ಬನಶಂಕರಿಯಿಂದ ವೈಟ್‌ಫೀಲ್ಡ್‌ನ ITPLಗೆ ಹೋಗ್ತಿರೋ ಬಸ್‌ನಲ್ಲಿ ಪ್ರಾಯಾಣ ಮಾಡಿದ್ದ. ಕುಂದಲಹಳ್ಳಿ ಹತ್ತಿರ KA-57-F 186 ನಂಬರ್‌ನ ವೊಲ್ವೊ ಬಸ್‌ನ್ನ ಏರಿದ್ದ. CMR Institute of Technology ಸ್ಟಾಪ್‌ನಲ್ಲಿ ಇಳಿದಿದ್ದಾನೆ ಅಂತ ಆರಂಭಿಕ ಮಾಹಿತಿಗಳು ಲಭ್ಯವಾಗ್ತಿವೆ. ಇನ್ನು ಪ್ರಕರಣ ಕುರಿತು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್‌ ಮಾತಾಡಿದ್ದಾರೆ.ʻನಾವು ತನಿಖೆಯನ್ನ ಕಂಟಿನ್ಯೂ ಮಾಡಿದ್ದೇವೆ. ವಿವಿಧ ಅಂಶಗಳನ್ನ ಪರಿಶೀಲಿಸಿ.. ಎಲ್ಲಾ ಆ್ಯಂಗಲ್‌ಗಳಿಂದಲೂ ತನಿಖೆ ನಡೆಸಲು 8 ತಂಡಗಳನ್ನ ರಚಿಸಲಾಗಿದೆ. ಸಾಕಷ್ಟು CCTV ಪುಟೇಜ್‌ಗಳನ್ನ ಕಲೆಕ್ಟ್‌ ಮಾಡಲಾಗಿದೆ. ಈ ಸ್ಫೋಟಕ್ಕೆ ದ್ವೇಷ ಕಾರಣವಿರಬಹುದಾ ಅಂತಲೂ ತನಿಖೆ ನಡೆಸಲಾಗ್ತಿದೆ. ಎಲ್ಲ ಪಕ್ಷಗಳು ನಮ್ಮೊಂದಿಗೆ ಕೋಪರೇಟ್‌ ಮಾಡ್ಬೇಕಾಗಿ ರಿಕ್ವೆಸ್ಟ್‌ ಮಾಡ್ತೀನಿʼ ಅಂತ ಹೇಳಿದ್ದಾರೆ. ಇನ್ನು ʻಬೆಂಗಳೂರಿನ ಈ ಸ್ಫೋಟಕ್ಕೂ ಮಂಗಳೂರಿನ ಕುಕ್ಕರ್‌ ಸ್ಫೋಟಕ್ಕೂ ಲಿಂಕ್‌ ಇದ್ಯಾ ಇಲ್ವಾ ಅಂತ ನಮಗೆ ಗೊತ್ತಿಲ್ಲ. ಟೆಕ್ನಿಕಲಿ ನೋಡೋದಾದ್ರೆ…ಆ ಸ್ಫೋಟದಲ್ಲಿ ಬಳಸಲಾಗಿರೋ ಸಾಮಗ್ರಿ ಮತ್ತು ಬೆಂಗಳೂರಿನ ಸ್ಫೋಟದಲ್ಲಿ ಬಳಸಲಾಗಿರೋ ಸಾಮಗ್ರಿ ಎರಡೂ ಕೂಡ ಒಂದೇಯಾಗಿದೆ. ನೆನ್ನೆ ನ್ಯಾಷನಲ್‌ ಸೆಕ್ಯುರಿಟಿ (NSG) ತಂಡ ಬೆಂಗಳೂರಿಗೆ ಆಗಮಿಸಿದೆ. ಸ್ಫೋಟ ಕುರಿತಾಗಿ ಸಿಎಂ ಸಿದ್ದರಾಮಯ್ಯನವ್ರೊಂದಿಗೆ ನಿನ್ನೆ ಮೀಟಿಂಗ್‌ ಕೂಡ ನಡೆಸಲಾಯ್ತು. ಸೋ, ಖಂಡಿತವಾಗಿಯೋ ನಾವು ಆರೋಪಿಯನ್ನ ಹುಡುಕಿಯೇ ಹುಡುಕ್ತೇವೆʼ ಅಂತ ಗೃಹ ಸಚಿವರು ಹೇಳಿದ್ದಾರೆ. ಅಲ್ದೇ ಸ್ಫೋಟ ಕುರಿತು ಜಿ. ಪರಮೇಶ್ವರ್‌ ಹಿರಿಯ ಅಧಿಕಾರಿಗಳೊಂದಿಗೆ ಹೈ ಲೆವೆಲ್‌ ಮೀಟಿಂಗ್‌ ಮಾಡಿದ್ದಾರೆ. ಇತ್ತ ಸಿಎಂ ಸಿದ್ರಾಮಯ್ಯ ಮಾತಾಡಿ, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದೇವೆ. ಸಧ್ಯಕ್ಕೆ ಸಿಸಿಬಿ ಪೊಲೀಸರು ತನಿಖೆ ಮಾಡ್ತಿದ್ದಾರೆ. ಅಗತ್ಯ ಬಿದ್ರೆ ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳಿಗೆ ಈ ಪ್ರಕರಣದ ತನಿಖೆಯನ್ನ ವರ್ಗಾವಣೆ ಮಾಡ್ತೇವೆ ಅಂತ ಹೇಳಿದ್ದಾರೆ.

ಇನ್ನೊಂದ್ಕಡೆ ʻಬೆಂಗಳೂರು ಸ್ಫೋಟಕ್ಕೂ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಬೆಂಬಲಿಗರು ಪಾಕ್‌ ಪರ ಘೋಷಣೆ ಕೂಗಿದ್ದಕ್ಕೂ ಕನೆಕ್ಷನ್‌ ಇದೆ. ಪಾಕಿಸ್ತಾನ್‌ ಪರ ಘೋಷಣೆ ಕೂಗಿದ ಎರಡೇ ದಿನಗಳ ಅಂತರದಲ್ಲಿ ಈ ಸ್ಫೋಟ ನಡೆದಿದೆ ಅಂತ ಕೇಂದ್ರ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಆರೋಪ ಮಾಡಿದ್ದಾರೆ.

ಇನ್ನು AIMIMನ ಅಧ್ಯಕ್ಷ, ಸಂಸದ ಅಸಾದುದ್ದೀನ್‌ ಓವೈಸಿ ಹೈದರಾಬಾದ್‌ನಲ್ಲಿರೋ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದಾರೆ. ಈ ಮೂಲಕ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಗಾಯಗೊಂಡವ್ರಿಗೆ ಸೂಚ್ಯವಾಗಿ ಬೆಂಬಲ ನೀಡಿದ್ದಾರೆ. ಹೀಗಂತ ಖುದ್ದು ಅಸಾದುದ್ದೀನ್‌ ತಮ್ಮ ಭೇಟಿ ಬಗ್ಗೆ ಹೇಳ್ಕೊಂಡಿದ್ದಾರೆ. ʻಕೆಫೆ ಮೇಲಿನ ದಾಳಿ ಒಂದ್‌ ರೀತಿ ಹೇಡಿತನ ಮತ್ತು ಭಾರತದ ಮೌಲ್ಯಗಳ ಮೇಲೆ ನಡೆಸಿರೋ ದಾಳಿʼʼಅಂತ ರಿಯಾಕ್ಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply