masthmagaa.com:

ಇಂಟರ್​ನ್ಯಾಷನಲ್ ಸ್ಪೇಸ್​ ಸ್ಟೇಷನ್​ನ (ISS) ಮೂವರು ಸಿಬ್ಬಂದಿ ರಷ್ಯಾದ ಸೋಯುಝ್ ಕ್ರಾಫ್ಟ್​ ಮೂಲಕ ಭೂಮಿ ಮೇಲೆ ಲ್ಯಾಂಡ್ ಆಗಿದ್ದಾರೆ. ಇದರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಓರ್ವ ಗಗನಯಾತ್ರಿ ಮತ್ತು ರಷ್ಯಾದ ಇಬ್ಬರು ಗಗನಯಾತ್ರಿಗಳು ಬಂದಿದ್ದಾರೆ. ಅವರಿದ್ದ ಸೋಯುಝ್ ಎಂಎಸ್​-17 ಸ್ಪೇಸ್​ಕ್ರಾಫ್ಟ್​ ಕಜಕಿಸ್ತಾನದಲ್ಲಿ ಲ್ಯಾಂಡ್ ಆಗಿದೆ. ಇವರೆಲ್ಲರೂ 2020ರ ಅಕ್ಟೋಬರ್​ನಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಇದ್ದರು. ಇಂಟರ್​ನ್ಯಾಷನಲ್ ಸ್ಪೇಸ್​ ಸ್ಟೇಷನ್ ಅನ್ನೋದು ಮಲ್ಟಿನ್ಯಾಷನಲ್ ಕೊಲಾಬರೇಟಿವ್ ಪ್ರಾಜೆಕ್ಟ್​. ಇದರಲ್ಲಿ 5 ಸ್ಪೇಸ್​ ಏಜೆನ್ಸಿಗಳು ಭಾಗಿಯಾಗಿವೆ. ಅಮೆರಿಕದ NASA, ರಷ್ಯಾದ Roscosmos, ಜಪಾನ್​ನ JAXA, ಯುರೋಪಿನ ESA ಮತ್ತು ಕೆನಡಾದ CSA.. ಇಂಟರ್​ನ್ಯಾಷನಲ್​ ಸ್ಪೇಸ್​​ ಸ್ಟೇಷನ್​ನ ಮಾಲೀಕತ್ವ ಮತ್ತು ಬಳಕೆಯು ಸರ್ಕಾರಗಳ ನಡುವೆ ಏರ್ಪಟ್ಟಿರೋ ಒಪ್ಪಂದಕ್ಕೆ ಅನುಗುಣವಾಗಿರುತ್ತೆ.

-masthmagaa.com

Contact Us for Advertisement

Leave a Reply