ಮೂರು ತಿಂಗಳಲ್ಲಿ ಮೊದಲ ಬಾರಿಗೆ ಮಾರ್ಕೆಟ್‌ ಮೂರು ದಿನ ಕುಸಿತ!

masthmagaa.com:

ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಷೇರುಮಾರುಕಟ್ಟೆ ಸತತ ಮೂರು ದಿನಗಳಲ್ಲಿ.. ಮೂರು ಮಾರ್ಕೆಟ್ ಸೆಶನ್‌ಗಳಲ್ಲಿ ಇಳಿಕೆ ಕಂಡಿದೆ. ಅದ್ರಲ್ಲೂ‌ ಮಂಗಳವಾರ IT ಸೆಕ್ಟರ್‌ ಸ್ಟಾಕ್‌ಗಳು ಮಾರ್ಕೆಟ್‌ ಕಾಲು ಹಿಡಿದು ಇನ್ನಷ್ಟು ಎಳೆದಿವೆ. ಇನ್ಫೋಸಿಸ್‌ ತನ್ನ ಗಳಿಕೆ ವರದಿ ರಿಲೀಸ್‌ ಮಾಡೋಕೆ ಮುಂಚೇನೆ ಹತತ್ರ 4% ಷೇರ್‌ ವ್ಯಾಲ್ಯೂ ಕಳ್ಕೊಂಡಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 456 ಪಾಯಿಂಟ್ಸ್‌ ಕಳೆದುಕೊಂಡು 72,944ಕ್ಕೆ ಇಳಿದ್ರೆ, ನಿಫ್ಟಿ 125 ಪಾಯಿಂಟ್ಸ್‌ ಕಮ್ಮಿಯಾಗಿ 22,148ಕ್ಕೆ ಇಳಿದಿದೆ. ಇನ್ಫೋಸಿಸ್‌ ಲಿಮಿಟೆಡ್ 3.61% ಷೇರುಬೆಲೆ ಕಳೆದುಕೊಂಡು ₹1,415ರ ಸುತ್ತ ಟ್ರೇಡಿಂಗ್‌ ನಡೆಸಿದೆ. ಅತ್ತ ರೂಪಾಯಿ ಬೆಲೆಯಲ್ಲಿ ಕೂಡ ದಾಖಲೆಯ ಇಳಿಕೆ ಕಂಡಿದೆ. ಡಾಲರ್‌ ಮುಂದೆ ರೂಪಾಯಿ ಮೌಲ್ಯ 83 ರೂಪಾಯಿ 54 ಪೈಸೆಗೆ ಕುಸಿದಿದೆ.

-masthmagaa.com

Contact Us for Advertisement

Leave a Reply