ಸಂಸದ ಸ್ಥಾನಕ್ಕೆ ದಿಢೀರನೆ ರಾಜೀನಾಮೆ ನೀಡಿದ ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್‌!

masthmagaa.com:

ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವ್ರು ತಮ್ಮ ಸಂಸತ್‌ ಸದಸ್ಯ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ನೀಡಿದ್ದಾರೆ. ಕೋವಿಡ್‌ ಹಿನ್ನಲೆಯಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳನ್ನ ಉಲ್ಲಂಘಿಸಿ, ಪಾರ್ಟಿಗಳನ್ನ ಆಯೋಜನೆ ಮಾಡಿರೋ ಬಗ್ಗೆ ಸಂಸತ್‌ಗೆ ಜಾನ್ಸನ್‌ ತಪ್ಪು ಮಾಹಿತಿ ನೀಡಿದ್ದರು ಅನ್ನೊ ಆರೋಪದ ಕುರಿತಾಗಿ ತನಿಖೆ ನಡೆಯುತ್ತಿದೆ. ಇನ್ನು ಈ ಪಾರ್ಟಿಗೇಟ್‌ ಹಗರಣದಲ್ಲಿ ಬೋರಿಸ್‌ ವಿರುದ್ಧ ಸಂಸದೀಯ ಸಮಿತಿಯಿಂದ ವರದಿ ಸಲ್ಲಿಕೆಯಾಗಿದ್ದು, ಶಿಕ್ಷೆಗೆ ಗುರಿಯಾಗೋ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾಗಿ ವರದಿ ರಿಲೀಸ್‌ ಆಗೋ ಮೊದಲೇ ಬೋರಿಸ್‌ ಸಂಸತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ನಾನು ಸುಳ್ಳು ಹೇಳಿಲ್ಲ ನನ್ನ ವಿರುದ್ಧ ಪಿತೂರಿ ನಡೆದಿದೆ. ಜೊತೆಗೆ ತನಿಖಾ ಸಂಸ್ಥೆ ಸತ್ಯ ಏನು ಅನ್ನೋದನ್ನ ಕನ್ಸಿಡರ್‌ ಮಾಡದೆ ಹಾಗೂ ಯಾವುದೇ ಎವಿಡೆನ್ಸ್‌ ಇಲ್ದೆ ನನ್ನನ್ನ ತಪ್ಪಿತಸ್ಥ ಅಂತ ಸಾಬೀತು ಮಾಡೋಕೆ ಹೊರಟಿದೆ ಅಂತ ಆರೋಪಿಸಿದ್ದಾರೆ. ಅಂದ್ಹಾಗೆ ಬೋರಿಸ್‌ ರಾಜೀನಾಮೆಯಿಂದ ತೆರವಾಗಿರೋ ಸಂಸತ್‌ ಸದಸ್ಯ ಸ್ಥಾನಕ್ಕೆ ಮರು ಚುನಾವಣೆ ಆಗೋ ಸಾಧ್ಯತೆಯಿದೆ.

-masthmagaa.com

Contact Us for Advertisement

Leave a Reply