ಹೆಚ್ಚಾಯ್ತು ರಷ್ಯಾದ ʻಹೈಬ್ರಿಡ್‌ ವಾರ್‌ಫೇರ್‌ʼ! ನ್ಯಾಟೋಗೆ ಆತಂಕ!

masthmagaa.com:

ಸಮುದ್ರಾಳದಲ್ಲಿ ದಾಳಿಗಳು ಹೆಚ್ಚಾಗ್ತಿರೋ ನಡುವೆಯೇ ನ್ಯಾಟೋ ಆತಂಕವನ್ನ ವ್ಯಕ್ತಪಡಿಸಿದೆ. ರಷ್ಯಾದ ಅಂಡರ್‌ವಾಟರ್‌ ʻಹೈಬ್ರಿಡ್‌ ವಾರ್‌ಫೇರ್‌ʼನಿಂದ ಯುರೋಪ್‌ ಹಾಗು ಉತ್ತರ ಅಮೆರಿಕದಾದ್ಯಂತ ನೂರು ಕೋಟಿ ಜನರ ರಕ್ಷಣೆ ಆಪತ್ತಿನಲ್ಲಿದೆ ಅಂತ ಹೇಳಿದೆ. ಅಂತರ್ಜಾಲ ಕೇಬಲ್‌ಗಳು, ವಿಂಡ್‌ಫಾರ್ಮ್‌ಗಳು, ಗ್ಯಾಸ್‌ ಪೈಪ್‌ಲೈನ್‌ಗಳು, ಪವರ್‌ ಕೇಬಲ್‌ಗಳು ರಷ್ಯಾದ ನೇರ ದಾಳಿಯ ಆತಂಕದಲ್ಲಿವೆ ಅಂತ ನ್ಯಾಟೋದ ನೌಕಾಪಡೆ Marcom ಮಾರ್ಕೋಮ್‌ನ ಡೆಪ್ಯುಟಿ ಕಮಾಂಡರ್‌ ವಿ. ಅಡ್ಮಿರಿಲ್‌ ಮ್ಯಾಲೆಟೆರ್‌ ಹೇಳಿದ್ದಾರೆ. 2022ರ ನಾರ್ಡ್‌ ಸ್ಟ್ರೀಮ್‌ ಪೈಪ್‌ಲೈನ್‌ಗಳ ಮೇಲಿನ ದಾಳಿ, ಕಳೆದ ಅಕ್ಟೋಬರ್‌ನ ಬಾಲ್ಟಿಕನೆಕ್ಟರ್‌ ಗ್ಯಾಸ್‌ಲೈನ್‌ ಮೇಲಿನ ದಾಳಿ ನಂತ್ರ ಈ ಆತಂಕ ವ್ಯಕ್ತವಾಗಿದೆ.

-masthmagaa.com

Contact Us for Advertisement

Leave a Reply