ಅಮೆರಿಕದ ಯುದ್ಧನೌಕೆಯನ್ನು ಓಡಿಸಿದ್ವಿ: ಚೀನಾ

masthmagaa.com:

ಅಮೆರಿಕದ ಯುದ್ಧನೌಕೆ ಅಕ್ರಮವಾಗಿ ಚೀನೀ ಸಮುದ್ರಗಡಿ ಪ್ರವೇಶಿಸಿದ್ದು, ಅದನ್ನು ನಾವು ಓಡಿಸಿದ್ದೇವೆ ಅಂತ ಚೀನಾ ಹೇಳಿಕೊಂಡಿದೆ. ಪಾರ್ಸೆಲ್ ಐಲ್ಯಾಂಡ್ ಬಳಿ ಯುಎಸ್​ಎಸ್​ ಬೆನ್ ಫೋಲ್ಡ್ ಅನ್ನೋ ಯುದ್ಧನೌಕೆ ಚೀನೀ ಸರ್ಕಾರದ ಅನುಮತಿ ಪಡೆಯದೇ ಜಲಗಡಿ ಪ್ರವೇಶಿಸಿದೆ. ಈ ಮೂಲಕ ಚೀನಾದ ಸಾರ್ವಭೌಮತ್ವ ಮತ್ತು ಸ್ಥಿರತೆಗೆ ಸವಾಲೊಡ್ಡಿದೆ ಅಂತ ಪೀಪಲ್ ಲಿಬರೇಷನ್ ಆರ್ಮಿಯ ಸದರ್ನ್​ ಥಿಯೇಟರ್ ಕಮಾಂಡ್ ಮಾಹಿತಿ ನೀಡಿದೆ. ಅಷ್ಟೇ ಅಲ್ಲ.. ಅಮೆರಿಕದ ನೌಕಾಪಡೆ ಇಂಥಾ ಪ್ರಚೋದನಕಾರಿ ಹೆಜ್ಜೆ ಇಡೋದನ್ನು ನಿಲ್ಲಿಸಬೇಕು ಅಂತ ಕೂಡ ವಾರ್ನಿಂಗ್ ಕೊಟ್ಟಿದೆ. ಆದ್ರೆ ಈ ಬಗ್ಗೆ ಅಮೆರಿಕದ ನೌಕಾಪಡೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಅಂದಹಾಗೆ ದಕ್ಷಿಣ ಚೀನಾ ಸಮುದ್ರದಲ್ಲಿರೋ ಸಂಪದ್ಭರಿತ ದ್ವೀಪಗಳು, ಹವಳದ ದಂಡೆಗಳನ್ನೆಲ್ಲಾ ಸೇರಿಸಿ ಪಾರ್ಸೆಲ್ ಐಲ್ಯಾಂಡ್​ ಅಂತ ಕರೆಯಲಾಗುತ್ತೆ. ಹೀಗಾಗಿ ಈ ದ್ವೀಪಗಳ ಒಂದಷ್ಟು ಭಾಗಗಳು ನಮಗೆ ಸೇರಿದ್ದು ಅಂತ ವಿಯೆಟ್ನಾಂ, ತೈವಾನ್, ದಿ ಫಿಲಿಪ್ಪೀನ್ಸ್​, ಮಲೇಷ್ಯಾ, ಬ್ರುನೇ ಸೇರಿದಂತೆ ಹಲವು ದೇಶಗಳು ಹೇಳಿಕೊಂಡಿವೆ. ಆದ್ರೆ ಚೀನಾ ಮಾತ್ರ ಈ ದ್ವೀಪಗಳ ಮೇಲೆ ತುಂಬಾ ಹಿಂದಿನಿಂದ ಅಂದ್ರೆ ರಾಜರ ಕಾಲದಿಂದಲೂ ನಮ್ಮ ನಿಯಂತ್ರಣದಲ್ಲಿದೆ. ನೈನ್ ಡ್ಯಾಶ್ ಲೈನ್ ಅಂದ್ರೆ ನೋಡಿ ಸ್ಕ್ರೀನ್ ಮೇಲೆ ಇದ್ಯಲ್ವಾ ಮಾರ್ಕ್.. ಅದು..ಅದ್ರ ಒಳಗೆ ಬರೋದೆಲ್ಲಾ ನಮ್ದೇ ಅಂತ ಅಂತ ಹೇಳ್ತಿದೆ. 2016ರಲ್ಲಿ ಇದೇ ದಿನ ಅಂದ್ರೆ ಜುಲೈ 12 ರಂದು ಹೇಗ್​ನಲ್ಲಿರೋ ಅಂತಾರಾಷ್ಟ್ರೀಯ ವಿವಾದಗಳ ಶಾಶ್ವತ ನ್ಯಾಯಾಧೀಕರಣ, ದಕ್ಷಿಣ ಚೀನಾ ಸಮುದ್ರದ ಮೇಲೆ ಐತಿಹಾಸಿಕ ನಿಯಂತ್ರನ ಹೊಂದಿಲ್ಲ. ಚೀನಾ ಪಿಲಿಪ್ಪೀನ್ಸ್​​ನ ಪಾರಂಪರಿಕ ಮೀನುಗಾರಿಕೆಗೂ ಅಡ್ಡಿಪಡಿಸ್ತಿದೆ. ಅದರ ರೀಡ್ ಬ್ಯಾಂಕ್​​​ನಲ್ಲಿ ಗ್ಯಾಸ್​, ತೈಲ ತೆಗೆಯೋ ಮೂಲಕ ಫಿಲಿಪ್ಪೀನ್ಸ್​​​​ನ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಅಂತ ಆರೋಪಿಸಿತ್ತು. ಆದ್ರೂ ಚೀನಾ ಮಾತ್ರ ಸೌತ್ ಚೀನಾ ಸೀ ನಂದೇ ಅನ್ಕೊಂಡು ಓಡಾಡ್ತಿದೆ. ಅದಕ್ಕೆ ಉರ್ಸೋಕೆ ಅಮೆರಿಕ ಆಗಾಗ ತನ್ನ ಯುದ್ಧನೌಕೆಗಳನ್ನು ಕಳುಹಿಸ್ತಾ ಇರುತ್ತೆ.

-masthmagaa.com

Contact Us for Advertisement

Leave a Reply