ಇರಾಕ್‌ಗೆ ಅಮೆರಿಕಾನ್‌ ಹೆಲಿಕಾಪ್ಟರ್‌ಗಳು!

masthmagaa.com:

ಇರಾಕ್‌ಗೆ ಅಮೆರಿಕ ನಿರ್ಮಿತ ಟೆಕ್ಸ್‌ಟ್ರಾನ್‌ ಯುನಿಟ್‌ನ ಬೆಲ್‌ ಹೆಲಿಕಾಪ್ಟರ್‌ಗಳನ್ನ ಸೇಲ್‌ ಮಾಡೋಕೆ ಅಮೆರಿಕ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ಗ್ರೀನ್‌ ಸಿಗ್ನಲ್‌ ನೀಡಿದೆ. 300 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 2,490 ಕೋಟಿ ರೂಪಾಯಿ ವೆಚ್ಚದ ಹೆಲಿಕಾಪ್ಟರ್‌ಗಳು ಹಾಗೂ ಅದಕ್ಕೆ ಸಂಬಂಧಿಸಿದ ಉಪಕರಣ, ಸರ್ವೀಸ್‌ಗಳ ಡೀಲ್‌ ಇದಾಗಿದೆ ಅಂತ ಪೆಂಟಗಾನ್‌ ಹೇಳಿದೆ. ಅಂದ್ಹಾಗೆ ಈಗಾಗ್ಲೆ ಇರಾಕ್‌ನ ಅಮೆರಿಕನ್‌ ವಾಯುನೆಲೆಗಳ ಮೇಲೆ ನಿರಂತರ ದಾಳಿಗಳು ನಡೀತಿರೊ ಈ ಟೈಮಲ್ಲಿ ಇಂತಹ ಬೆಳವಣಿಗೆ ಆಗಿರೋದು ಪರಿಸ್ಥಿತಿ ಇನ್ನಷ್ಟು ಹಾಳಗೋಕೆ ದಾರಿ ಮಾಡತ್ತೆ ಅನ್ಸತ್ತೆ.

-masthmagaa.com

Contact Us for Advertisement

Leave a Reply