ಪ್ರಧಾನಿ ಮೋದಿ 11 ದಿನ ಉಪವಾಸ ಮಾಡಿದ್ದು ಸುಳ್ಳು: ವೀರಪ್ಪ ಮೊಯ್ಲಿ

masthmagaa.com:

ಅಯೋಧ್ಯೆಯ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಪ್ರಧಾನಿ ಮೋದಿ 11 ದಿನಗಳ ಉಪವಾಸ ಮಾಡಿದ್ರು. ಆದ್ರೆ ಈಗ ಮೋದಿ ಉಪವಾಸ ಬಗ್ಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಲೇವಡಿ ಮಾಡಿದ್ದಾರೆ. ಮೋದಿ ಉಪವಾಸ ಮಾಡಿದ್ದೆ ಡೌಟು ಅಂತ ಹೇಳಿದ್ದಾರೆ. ರಾಮಲಲ್ಲಾ ಪ್ರತಿಷ್ಠಾಪನೆ ಅಂಗವಾಗಿ ಮೋದಿ ಉಪವಾಸ ಮಾಡಿಲ್ಲ. ಎಳನೀರು ಮಾತ್ರ ಕುಡಿದು ಉಪವಾಸ ಮಾಡಿದ್ರೆ ಒಂದೆರೆಡು ದಿನಗಳಲ್ಲಿ ಮನುಷ್ಯ ಬೀಳ್ತಾನೆ. 11 ದಿನಗಳ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ ಡಾಕ್ಟರ್‌ ಪ್ರಕಾರ ಈ ರೀತಿ ಉಪವಾಸ ಮಾಡೋದು ಅಸಾಧ್ಯ. ಆದ್ರೆ ಮೋದಿ ಬಹಳ ಜೋರಾಗಿ ಒಡಾಡಿದ್ರು. ಉಪವಾಸ ಇದ್ದ ಹಾಗೆ ಕಾಣಲಿಲ್ಲ. ಇವರ ನಾಟಕ ಇನ್ನು ಮುಂದೆ ನಡೆಯಲ್ಲ ಅಂತ ಮೋದಿ ಉಪವಾಸ ವ್ರತದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಗುಜರಾತ್‍ ಹತ್ಯಾಕಾಂಡದ ವೇಳೆ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ರಾಜಧರ್ಮ, ಕಾನೂನು ಪರಿಪಾಲನೆ ಮಾಡಲಿಲ್ಲ. ಅಂಥವರಿಂದ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿಸಿದ್ದು ಎಷ್ಟು ಸರಿ.. ಅವರಿಂದ ದೇವಾಲಯಕ್ಕೆ ಎಷ್ಟು ಪಾವಿತ್ರ್ಯತೆ ಬರಲಿದೆ.. ಮೋದಿ ಗರ್ಭಗುಡಿಗೆ ಪ್ರವೇಶ ಮಾಡಿದ್ದೇ ತಪ್ಪು, ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಸಹ ತಪ್ಪು, ನಿಜವಾದ ಸ್ವಾಮೀಜಿಗಳು, ಬ್ರಾಹ್ಮಣರು ಆಗಿದ್ರೆ ನರೇಂದ್ರ ಮೋದಿಯನ್ನ ಗರ್ಭಗುಡಿ ಒಳಗೆ ಬಿಡಬಾರದಿತ್ತು ಅಂತ ವಾಗ್ದಾಳಿ ನಡೆಸಿದ್ದಾರೆ.

ಇನ್ನೊಂದ್‌ ಕಡೆ ಶಿವಸೇನೆ ಇಲ್ಲ ಅಂದಿದ್ರೆ ಪ್ರಾಣ ಪ್ರತಿಷ್ಠಾಪನೆ ನಡಿತಾ ಇರಲಿಲ್ಲ ಅಂತ ಉದ್ಧವ್‌ ಠಾಕ್ರೆ ಬಣದ ನಾಯಕ ಸಂಜಯ್‌ ರಾವುತ್‌ ಹೇಳಿದ್ದಾರೆ. ನಮಗೂ ರಾಮನಿಗೂ ಭಾರಿ ಹಳೆಯ ಸಂಬಂಧವಿದೆ. ಒಂದ್‌ ವೇಳೆ ಶಿವಸೇನಾ ಇಲ್ಲದಿದ್ರೆ ಶ್ರೀರಾಮನ ಪ್ರತಿಷ್ಠಾಪನೆ ನಡಿತಾ ಇರ್ಲಿಲ್ಲ. ಶಿವಸೇನಾದ ಹುಲಿಗಳು ತೋರಿಸಿದ ಧೈರ್ಯದಿಂದಾಗಿ ಪ್ರಧಾನಿ ಮೋದಿ ಅವ್ರು ಪ್ರತಿಷ್ಠಾಪನೆ ಮಾಡುವಂತಾಯ್ತು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply