ಬ್ರಿಟನ್‌ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹೊಸ ವರದಿ!

masthmagaa.com:

ಭಾರತದಲ್ಲಿ ಲೋಕಸಭಾ ಚುನಾವಣೆ ಹತ್ರವಾಗ್ತಿದ್ಹಾಗೆ ಪಾಶ್ಚಿಮಾತ್ಯ ದಿನಪತ್ರಿಕೆಗಳು ಭಾರತದ ಪರ ಮತ್ತು ಭಾರತ ವಿರೊಧಿ ಲೇಖನಗಳನ್ನ ಬರೆಯೋದು ಜಾಸ್ತಿ ಆಗಿದೆ. ಅದರಲ್ಲೂ ಅಧಿಕಾರದಲ್ಲಿರೋ ಬಿಜೆಪಿ ಸರ್ಕಾರ, ಪಿಎಂ ನರೇಂದ್ರ ಮೋದಿ ವಿರುದ್ಧ ಹಾಗೂ ಭಾರತದ ಡೆಮಾಕ್ರೆಸಿಯನ್ನ ಪ್ರಶ್ನಿಸಿ ಲೇಖನಗಳನ್ನ ಬರೀತಿವೆ. ಇದೀಗ ಬ್ರಿಟನ್‌ನ ʻದಿ ಟೈಮ್ಸ್‌ʼ ದಿನಪತ್ರಿಕೆ ಪಿಎಂ ಮೋದಿ ಬಗ್ಗೆ ನೆಗೇಟಿವ್‌ ಮತ್ತು ಪಾಸಿಟಿವ್‌ ಎರಡೂ ರೀತಿನಲ್ಲೂ ಲೇಖನ ಬರೆದಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತ್ರ ಬಹುಶಃ ಪ್ರಧಾನಿ ನರೇಂದ್ರ ಮೋದಿಯವ್ರನ್ನ ಅತ್ಯಂತದ ದೊಡ್ಡ ನಾಯಕ ಅಂತ ಗುರುತಿಸಲ್ಪಡೋ ಸಾಧ್ಯತೆಯಿದೆ ಅಂತ ರಿಪೋರ್ಟ್‌ ಮಾಡಿದೆ. ಅಲ್ದೇ ಪಾಶ್ಚಿಮಾತ್ಯ ದೇಶಗಳನ್ನ ತಿರಸ್ಕಾರ ಮಾಡಿ, ಭಾರತೀಯರು ಜಾಗತಿಕವಾಗಿ ಗುರುತಿಸಕೊಳ್ಳೋ ಸಮಯ ಬಂತು ಅಂತ ಹೇಳಿ, ಮೋದಿಯವರು ತಾವೊಬ್ಬ ಪ್ರಭಾವಿ ನಾಯಕ ಅನ್ನೋ ಇಮೇಜ್‌ನ್ನ ಕ್ರಿಯೇಟ್‌ ಮಾಡಿದ್ದಾರೆ ಅಂತ ಹೇಳಿದೆ. ಇದೇ ವೇಳೆ ಅವ್ರ ಜನಪ್ರಿಯತೆಗೆ ಮತ್ತೊಂದು ಮುಖ ಕೂಡ ಇದೆ… ಡಾರ್ಕ್‌ ಸೈಡ್‌ ಇದೆ ಅಂತೇಳಿ ಸಾಲುಗಳನ್ನ ಬರೆದಿದೆ. ʻಮೋದಿಯವ್ರಲ್ಲಿ ಬರೀ ಹಿಂದುತ್ವವೇ ತುಂಬ್ಕೊಂಡಿದೆ. ಭಾರತದ ಬಹುದೊಡ್ಡ ಅಲ್ಪಸಂಖ್ಯಾತರಾಗಿರೋ ಮುಸ್ಲಿಂರ ವಿರುದ್ಧ ತಾರತಮ್ಯ ನಡೆಸ್ತಿದ್ದಾರೆ. ಅವ್ರ ವಿರುದ್ಧ ಹೊಸ ಹೊಸ ಕಾನೂನು ಪಾಸ್‌ ಮಾಡ್ತಿದ್ದಾರೆʼ ಅಂತ ಪತ್ರಿಕೆ ಹೇಳಿದೆ. ಜೊತೆಗೆ ನರೇಂದ್ರ ಮೋದಿಯವ್ರು ವಿಪಕ್ಷಗಳ ವಿಚಾರದಲ್ಲಿ ತೀವ್ರ ಅಸಹನೆ ಹೊಂದಿದ್ದಾರೆ ಅಂತೇಳಿ ಅರವಿಂದ್‌ ಕೇಜ್ರಿವಾಲ್‌ರ ಬಂಧನ ಉಲ್ಲೇಖಿಸಿದೆ. ಅಂದ್ಹಾಗೆ ಇತ್ತೀಚೆಗೆ ಬ್ರಿಟನ್‌ನ ಫಿನಾನ್ಶಿಯಲ್‌ ಟೈಮ್ಸ್‌ ಮತ್ತು ದಿ ಗಾರ್ಡಿಯನ್‌ಗಳಂತಹ ಪ್ರಸಿದ್ಧ ಪತ್ರಿಕೆಗಳು ಇದೇ ರೀತಿ ವರದಿಗಳನ್ನ ಮಾಡಿದ್ವು.

-masthmagaa.com

Contact Us for Advertisement

Leave a Reply