ಮೂರು ತಿಂಗಳ ಗರಿಷ್ಟ ಮಟ್ಟಕ್ಕೆ ಸಗಟು ಬೆಲೆ ಹಣದುಬ್ಬರ!

masthmagaa.com:

ಇದೇ ಟೈಮಲ್ಲಿ ದೇಶದ ಸಗಟು ಬೆಲೆ ಹಣದುಬ್ಬರ ಮೂರು ತಿಂಗಳ ಗರಿಷ್ಟ ಮಟ್ಟ ತಲುಪಿದೆ. ಆಹಾರ, ವಿದ್ಯುತ್‌, ಕಚ್ಚಾ ತೈಲ, ನೈಸರ್ಗಿಕ ಅನಿಲ ಹಾಗೂ ಯಂತ್ರೋಪಕರಣಗಳ ಬೆಲೆ ಏರಿಕೆಯಿಂದಾಗಿ ವೋಲ್‌ಸೇಲ್‌ ಇನ್‌ಫ್ಲೇಶನ್‌ 0.53%ಗೆ ತಲುಪಿದೆ. ಇನ್ನು ಕಳೆದ ವರ್ಷ ಇದೇ ಟೈಮಲ್ಲಿ WPI 1.41%ನಷ್ಟಿತ್ತು. ಇನ್ನು ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರ ಅಥ್ವಾ ರೀಟೇಲ್‌ ಇನ್‌ಫ್ಲೇಶನ್‌ 10 ತಿಂಗಳ ಕನಿಷ್ಟ ಮಟ್ಟಕ್ಕೆ ತಲುಪಿದೆ. ಹಾಲು, ಮೊಟ್ಟೆ, ಹಾಲಿನ ಉತ್ಪನ್ನಗಳು, ಹಣ್ಣು, ಧಾನ್ಯಗಳು ಹಾಗೂ ಸಾಂಬಾರ ಪದಾರ್ಥಗಳ ಬೆಲೆ ನಿಧಾನವಾಗಿ ಜಾಸ್ತಿಯಾಗ್ತಿರೋದ್ರಿಂದ, ಚಿಲ್ಲರೆ ಹಣದುಬ್ಬರ 4.85%ಗೆ ಇಳಿದಿದೆ ಅಂತ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

-masthmagaa.com

Contact Us for Advertisement

Leave a Reply