ಹೈಡ್ರಾಕ್ಸಿಕ್ಲೋರೋಕ್ವಿಲ್‌ ಟ್ಯಾಬ್ಲೆಟ್‌ನಿಂದ ಸತ್ತರಾ 17 ಸಾವಿರ ಜನ?

masthmagaa.com:

ಕೋವಿಡ್‌ ಟೈಮಲ್ಲಿ ಫೇಮಸ್‌ ಆಗಿದ್ದ ಹೈಡ್ರಾಕ್ಸಿಕ್ಲೋರೋಕ್ವಿಲ್‌ (HCQ) ಟ್ಯಾಬ್ಲೆಟ್‌ 17 ಸಾವಿರ ಜನರ ಸಾವಿಗೆ ಪ್ರಚೋದಿಸಿತ್ತು ಅನ್ನೋ ಶಾಕಿಂಗ್‌ ವರದಿ ಬಂದಿದೆ. ಮೊದ್ಲು ಫ್ಲಾನ್ಸ್‌ನಲ್ಲಿ ಈ ಮಾತ್ರೆ ಕೋವಿಡ್‌ ವಿರುದ್ಧ ಎಫೆಕ್ಟಿವ್‌ ಇದೆ ಅನ್ನೋ ವಿಚಾರ ಸ್ಪ್ರೆಡ್‌ ಆಯ್ತು. ಆನಂತರ ಖುದ್ದು ಪ್ರೆಸಿಡೆಂಟ್‌ ಮ್ಯಾಕ್ರಾನ್‌ ಇದ್ರ ತಯಾರಿಕ ಘಟಕಕ್ಕೆ ಭೇಟಿ ನೀಡಿದ್ರು. ಆಮೇಲೆ ಬಹಳ ದೇಶಗಳ ನಾಯಕರು ಇದ್ರ ಬಗ್ಗೆ ಮಾತನಾಡಿ, ಬಹಳ ಡಿಮ್ಯಾಂಡ್‌ ಪಡೆದಿತ್ತು. ಹಲವು ದೇಶಗಳು ಇದ್ರ ಎಮರ್ಜೆನ್ಸಿ ಬಳಕೆಗೆ ಅನುಮತಿ ನೀಡಿ, ಆಮೇಲೆ ವಾಪಸ್‌ ತಗೊಂಡಿದ್ವು. ಆದ್ರೆ ಇದೀಗ ಯುರೋಪಿಯನ್‌ ದೇಶಗಳಲ್ಲಿ ನಡೆದಿರೋ ರಿಸರ್ಚ್‌ ಒಂದ್ರಿಂದ, HCQ ಬಳಸಿ ಸತ್ತ ಜನರ ನಂಬರ್ಸ್‌, ಬಳಸದೇ ಸತ್ತವರಿಗಿಂತ 11% ಜಾಸ್ತಿ ಇದೆ ಅನ್ನೋ ಶಾಕಿಂಗ್‌ ವಿಚಾರ ಬಯಲಾಗಿದೆ. ಆದ್ರೆ ಇದು ಕಡಿಮೆ ದೇಶಗಳ, ಕಡಿಮೆ ಜನರನ್ನ ಸರ್ವೇ ಮಾಡಿ ಲೆಕ್ಕ ಹಾಕಿರೋ ರಫ್‌ ಎಸ್ಟಿಮೇಶನ್‌ ಅಷ್ಟೇ ಅಂತ ತಜ್ಞರು ಹೇಳಿದ್ದಾರೆ. ಸೋ ಮುಂದೆ ಇಂತಹ ಪ್ಯಾಂಡಮಿಕ್‌ ಸಂದರ್ಭ ಬಂದ್ರೆ, HCQ ನಂತ Off-label ಪ್ರೆಸ್ಕ್ರಿಪ್ಶನ್‌ಗಳು ಅಂದ್ರೆ, ವೈಜ್ಞಾನಿಕವಾಗಿ ರೋಗದ ಮೇಲೆ ಎಫೆಕ್ಟಿವ್‌ ಇವೆ ಅಂತ ಪ್ರೂವ್‌ ಆಗಿಲ್ಲದ ಮೆಡಿಸನ್‌ ತಗೋಬಾರ್ದು ಅಂತ ತಜ್ಞರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply