ವೆಬ್‌ ಟೆಲಿಸ್ಕೋಪ್‌: ಈ ಚಿತ್ರಗಳನ್ನ ನೀವು ಯಾವತ್ತೂ ನೋಡಿರಲ್ಲ….

masthmagaa.com:

ನೆನ್ನೆ ಬೈಡನ್‌, ಜೇಮ್ಸ್‌ ವೆಬ್‌ ಬಾಹ್ಯಾಕಾಶ ಟೆಲಿಸ್ಕೋಪ್‌ ತೆಗೆದ ಮೊದಲ ಹೈ-ರೆಸಲ್ಯುಷನ್‌ ಚಿತ್ರವನ್ನ ಬಿಡುಗಡೆ ಮಾಡಿದ್ರು. ಅದ್ರ ಬೆನ್ನಲ್ಲೇ ಇದೀಗ ನಾಸಾ ಅಗಾಧ ವಿಶ್ವದ ಎಂದೂ ಕಂಡು ಕೇಳರಿಯದಂತಹ ಚಿತ್ರಗಳನ್ನ ಬಿಡುಗಡೆ ಮಾಡ್ತಿದೆ. ವೆಬ್‌ ಟೆಲಿಸ್ಕೋಪ್‌ ತೆಗೆದ ಇನ್‌ಫ್ರಾರೆಡ್‌ ಚಿತ್ರಗಳು ನಮ್ಮನ್ನ 1300 ವರ್ಷ ಹಿಂದಕ್ಕೆ ಕರೆದುಕೊಂಡು ಹೋಗ್ತಾ ಇದ್ದು ಖಗೋಳಶಾಸ್ತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿವೆ ಎನ್ನಲಾಗ್ತಿದೆ. ನಾಸಾದ ಬಿಲ್‌ ನೆಲ್ಸನ್‌, ಒಂದೊಂದು ಚಿತ್ರವೂ ಒಂದೊಂದು ಹೊಸ ಆವಿಷ್ಕಾರ ಅಂತ ಬಣ್ಣಿಸಿದ್ದಾರೆ. ಈ ಚಿತ್ರಗಳಲ್ಲಿ ಸ್ಟಿಫನ್‌ ಕ್ವಿಂಟೆಟ್‌ ಅಂದ್ರೆ ಐದು ಗ್ಯಾಲಾಕ್ಸಿಗಳ ಗುಚ್ಚ ಇದೆ. ಜೊತೆಗೆ ಪರ್ವತಗಳು ಮತ್ತು ಕಣಿವೆಗಳ ರೀತಿ ಕಾಣುವ ಹೊಳೆಯುವ ನಕ್ಷತ್ರಗಳ ದೃಶ್ಯವಿದೆ. ಮತ್ತೊಂದ್ರಲ್ಲಿ ನಕ್ಷತ್ರ ಹುಟ್ಟುವ ಪ್ರದೇಶ ಕ್ಯಾರಿನಾ ನೆಬುಲಾ ಅಥವಾ NGC 3324 ಇದೆ. ಈ ರೀತಿ ಒಂದಕ್ಕಿಂತ ಒಂದು ಅಮೋಘ ಚಿತ್ರಗಳು ಇವೆ. ಕಳೆದ ಡಿಸೆಂಬರ್‌ನಲ್ಲಿ ಎರಿಯಾನ್‌-5 ರಾಕೆಟ್‌ನಲ್ಲಿ ಲಾಂಚ್‌ ಆದ ಈ ಟೆಲಿಸ್ಕೋಪ್‌ ಸದ್ಯ ಭೂಮಿಯಿಂದ 16 ಲಕ್ಷ ಕಿ.ಮೀ ದೂರದಲ್ಲಿರುವ ಸೆಕಂಡ್‌ ಲ್ಯಾಗ್‌ರೇಂಜ್‌ ಎಂಬ ಪ್ರದೇಶದಲ್ಲಿ ಇದೆ. ಇದು ವಿಶ್ವದ ಅತಿದೊಡ್ಡ ಸ್ಫೇಸ್‌ ಟೆಲಿಸ್ಕೋಪ್‌ ಆಗಿದ್ದು ನಾಸಾ, ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಮತ್ತು ಕೆನಡಿಯನ್‌ ಸ್ಪೇಸ್‌ ಏಜೆನ್ಸಿ ಇದನ್ನ ನಿರ್ವಹಿಸ್ತಾ ಇವೆ.

-masthmagaa.com

Contact Us for Advertisement

Leave a Reply