ಪಾಕ್‌ ಸಂಸತ್‌ ಆವರಣದಲ್ಲಿ ಚಪ್ಪಲಿ ಕಳವು: ತನಿಖೆಗೆ ಆದೇಶಿಸಿದ ಸ್ಪೀಕರ್!

masthmagaa.com:

ಆರ್ಥಿಕತೆ ಹದಗೆಟ್ಟು ವಿದೇಶಗಳ ಮುಂದೆ ಸಾಲ, ಸಾಲ ಅಂತಿರೋ ಪಾಕ್‌ ಮತ್ತೊಮ್ಮೆ ಅಂತಾರಾಷ್ಟ್ರೀಯವಾಗಿ ಟ್ರೋಲ್‌ಗೆ ಒಳಗಾಗಿದೆ. ಪಾಕ್‌ ಸಂಸತ್ತಿನ ಆವರಣದಲ್ಲಿರೊ ಮಸೀದಿಯಿಂದ 20 ಜೋಡಿ ಶೂಗಳನ್ನ ಕಳ್ಳತನ ಮಾಡಲಾಗಿದ್ದು ತನಿಖೆಗೆ ಆದೇಶ ಕೊಡಲಾಗಿದೆ. ಶುಕ್ರವಾರ ಪಾರ್ಲಿಮೆಂಟ್‌ ಮೆಂಬರ್‌ಗಳು, ಸಿಬ್ಬಂದಿ ಹಾಗೂ ಪತ್ರಕರ್ತರು ಮಸೀದಿ ಮುಂದೆ ತಮ್ಮ ಚಪ್ಪಲಿಗಳ ಬಿಟ್ಟು ನಮಾಜ್‌ ಮಾಡಲು ಹೋಗಿದ್ರು. ಆದ್ರೆ ನಮಾಜ್‌ ಮಾಡಿ ಹೊರ ಬರುವಷ್ಟರಲ್ಲಿ 20 ಜೋಡಿ ಶೂಗಳನ್ನ ಯಾರೋ ಕ‍ಳ್ಳತನ ಮಾಡಿ ಸಂಸತ್‌ ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ. ಆದ್ರೆ ಯಾರೂ ಅಂತ ಗೊತ್ತಿಲ್ಲ. ಸಂಸತ್‌ನ ಆವರಣದಲ್ಲೇ ಅದು ಇಂಪಾರ್ಟೆಂಟ್‌ ವ್ಯಕ್ತಿಗಳ ಚಪ್ಪಲಿ ಕಳುವಾಗಿರೋದು ಪಾಕ್‌ನಲ್ಲಿ ಕೋಲಾಹಲ ಸೃಷ್ಟಿಸಿದ್ದು ಈಗ ಸಂಸತ್‌ ಭದ್ರತೆ ಬಗ್ಗೆ ನ್ಯಾಷನಲ್‌ ಅಸೆಂಬ್ಲಿ ಸ್ಪೀಕರ್‌ ಸರ್ದಾರ್‌ ಅಯಾಜ್‌ ಸಿದ್ದಿಕಿ ರಿಪೋರ್ಟ್‌ ತರಿಸಿಕೊಳ್ತಿದ್ದಾರಂತೆ.. ಚಪ್ಪಲಿ ಕಳ್ಳತನ ವಿಚಾರವಾಗಿ ತನಿಖೆ ನಡೆಸಲು ಆದೇಶ ನೀಡೊದಾಗಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply