ರಾಜಸ್ಥಾನ: 20 ವರ್ಷದ NEET ಆಕಾಂಕ್ಷಿ ಆತ್ಮಹತ್ಯೆ

masthmagaa.com:

NEET ಆಕಾಂಕ್ಷಿ, 20 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನ ಪಶ್ಚಿಮ ಬಂಗಾಳ ಮೂಲದ ಫೊರೀದ್‌ ಹುಸ್ಸೇನ್‌ ಅಂತ ಗುರುತಿಸಲಾಗಿದೆ. ಈತ ಕೋಟಾದಲ್ಲಿ ತನ್ನ ಗೆಳೆಯರೊಂದಿಗೆ ಬಾಡಿಗೆ ಮನೆಯೊಂದ್ರಲ್ಲಿ ವಾಸಿಸ್ತಿದ್ದ. ಈ ಘಟನೆಗೆ ಕಾರಣ ಪತ್ತೆಹಚ್ಚೋದಕ್ಕೆ ಪೊಲೀಸ್‌ ತನಿಖೆ ಶುರು ಮಾಡಿದ್ದಾರೆ. ಅಂದ್ಹಾಗೆ ಕಳೆದ ಕೆಲ ತಿಂಗಳಿಂದ ಕೋಟಾದಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗ್ತಿದ್ದು, ಈ ವರ್ಷದಲ್ಲಿ ಇಂತಹದ್ದೇ ಒಟ್ಟು 28 ಕೇಸ್‌ಗಳು ದಾಖಲಾಗಿವೆ. ಈ ರೀತಿ ಕೋಟಾದಲ್ಲಿ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗ್ತಿರೋ ವಿಚಾರ ಅಲ್ಲಿನ ಅಧಿಕಾರಿಗಳ ತಲೆ ಕೆಡಿಸಿದೆ.

-masthmagaa.com

Contact Us for Advertisement

Leave a Reply