ಹಡಗಿನಲ್ಲಿದ್ದ 22 ಭಾರತೀಯರು ಸೇಫ್:‌ ಥ್ಯಾಂಕ್ಸ್ ಹೇಳಿದ ಬೈಡೆನ್‌!

masthmagaa.com:

ಅಮೆರಿಕದ ಬಾಲ್ಟಿಮೊರ್‌ ನಗರದ ಬ್ರಿಡ್ಜ್‌ಗೆ ಗುದ್ದಿದ್ದ ದೊಡ್ದ ಕಂಟೇನರ್‌ ಹಡಗಿನಲ್ಲಿ 22 ಭಾರತೀಯರಿದ್ರು, ಸದ್ಯ ಅವ್ರೆಲ್ಲ ಸೇಫ್‌ ಆಗಿ ಇದಾರೆ ಅಂತ ಮಾಹಿತಿ ಲಭ್ಯ ಆಗಿದೆ. ಅಲ್ದೇ ಅವ್ರೆಲ್ಲ ಅಪಾಯದಲ್ಲಿದ್ದಾಗ ಏಮರ್ಜೆನ್ಸಿ ಕಾಲ್‌ ಮಾಡಿದ ಪರಿಣಾಮ, ರಕ್ಷಣಾ ಕಾರ್ಯಾಚರಣೆಗೆ ಹೆಲ್ಪ್‌ ಆಗಿದೆ. ಈ ರೀತಿ ಮಾಹಿತಿ ನೀಡಿದ್ದಕ್ಕೆ ಅಮೆರಿಕ ಅಧ್ಯಕ್ಷ ಜೊ ಬೈಡನ್‌ ಭಾರತೀಯರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಇನ್ನು ಸೇತುವೆ ಮುರಿದು ಬಿದ್ದಾಗ ಬ್ರಿಡ್ಜ್‌ ಮೇಲಿದ್ದ ಆರು ಜನ ನಾಪತ್ತೆಯಾಗಿದ್ರು. ಈಗ ಸತತ ಹುಡುಕಾಟದ ನಂತರ ಅವರೆಲ್ಲ ಮೃತಪಟ್ಟಿರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ. ಅಲ್ದೇ ಸದ್ಯ ಹುಡುಕಾಟದ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಇನ್ನು ಮುರಿದು ಬಿದ್ದಿರೊ ಬಾಲ್ಟಿಮೊರ್‌ ಬ್ರಿಡ್ಜ್‌ನ ಮರು ನಿರ್ಮಾಣ ಕಾಮಗಾರಿಯ ಸಂಪೂರ್ಣ ವೆಚ್ಚವನ್ನ ಅಮೆರಿಕದ ಫೆಡರಲ್ ಸರ್ಕಾರ ಭರಿಸುತ್ತೆ. ಈ ವಿಚಾರವಾಗಿ ಸಂಸತ್‌ನಲ್ಲಿ ನನಗೆ ಬೆಂಬಲ ಸಿಗೋ ನಿರೀಕ್ಷೆ ಇದೆ ಅಂತ ಬೈಡನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply